
ದಿವಂಗತ ಎಂ. ಲೋಕಯ್ಯ ಶೆಟ್ಟಿಯವರ 16ನೇ ವರ್ಷದ ಸಂಸ್ಮರಣಾರ್ಥ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾಟವು ಸುರತ್ಕಲ್ನ ದಿವಂಗತ ಲೋಕಯ್ಯ ಶೆಟ್ಟಿ ಸ್ಮಾರಕ ರಂಗ ಮಂದಿರದಲ್ಲಿ ನಡೆಯಿತು. ವಿವಿಧ ಕಡೆಗಳಿಂದ ಕುಸ್ತಿಪಟುಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕುಸ್ತಿ ಸಂಘ ಮಂಗಳೂರು ಹಾಗೂ ಕರ್ನಾಟಕ ಸೇವಾ ವೃಂದ ಸುರತ್ಕಲ್ ಇವರ ಸಹಕಾರದೊಂದಿಗೆ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ, ಕಾರ್ಮಿಕ ಕ್ಷೇತ್ರದ ಧೀಮಂತ ನಾಯಕ ಅಗಲಿದ ಮಹಾನ್ ಚೇತನ ದಿವಂಗತ ಎಂ. ಲೋಕಯ್ಯ ಶೆಟ್ಟಿಯವರ 16ನೇ ವರ್ಷದ ಸಂಸ್ಮರಣಾರ್ಥ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟವನ್ನು ಆಯೋಜಿಸಿದ್ದರು. ಪಂದ್ಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಅವರು ದಿವಂಗತ ಲೋಕಯ್ಯ ಶೆಟ್ಟಿ ಅವರ ಸ್ಮರಣಾರ್ಥ ಕುಸ್ತಿ ಪಂದ್ಯಾಟವನ್ನು ಆಯೋಜಿಸಿದ್ದಾರೆ. ಇದರಿಂದ ಇಲ್ಲಿಯ ಕುಸ್ತಿಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.
ಆನಂತರ ಕುಸ್ತಿ ಸಂಘದ ಅಧ್ಯಕ್ಷರಾದ ಎಂ. ಸುರೇಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ದಿವಂಗತ ಎಂ. ಲೋಕಯ್ಯ ಶೆಟ್ಟಿ ಅವರು ಮಾಡಿದ ಸೇವೆ ಹಲವಾರಿದೆ. ಅವರ ಸ್ಮರಣಾರ್ಥ ಕುಸ್ತಿ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು ಈ ಬಾರಿ 16ನೇ ವರ್ಷದ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ ಎಂದ ಅವರು ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು.