Header Ads
Breaking News

ಸುರತ್ಕಲ್‍ನ ಬಂಟರ ಸಂಘದಲ್ಲಿ ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಯವರು ಆಟೋ ರಿಕ್ಷಾ ಚಾಲಕ ಮಾಲಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಸುರತ್ಕಲ್ ಬಂಟರ ಸಂಘದಲ್ಲಿ ಜರುಗಿತು. ಸಾಂಕೇತಿಕವಾಗಿ ಚಾಲಕರಿಗೆ ಸಾಮಗ್ರಿಗಳನ್ನು ವಿತರಿಸಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1500ಕ್ಕೂ ಮಿಕ್ಕಿ ಚಾಲಕರಿಗೆ ಕಿಟ್ ವಿತರಿಸಲಾಗಿದೆ. ಇಲ್ಲಿ ಕಷ್ಟದಲ್ಲಿರುವ ಎಲ್ಲರಿಗೂ ಆದ್ಯತೆ. ಜಾತಿ,ಮತಕ್ಕೆ ಇಲ್ಲಿ ಆದ್ಯತೆಯಿಲ್ಲ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗಿದೆ ಎಂದರು.ರಿಕ್ಷಾಚಾಲಕರಿಗೆ ಕೋರೊನಾ ಸೋಂಕನ್ನು ತಡೆಗಟ್ಟುವುದು ಹೇಗೆ ಎಂಬ ವಿಚಾರದಲ್ಲಿ ಸ್ವತಃ ವೈದ್ಯರಾಗಿರುವ ಶಾಸಕರು ಕಿವಿಮಾತು ಹೇಳಿದರು.ಪದೇ ಪದೇ ಕಣ್ಣು,ಮೂಗು ಮುಟ್ಟುವುದರಿಂದ ದೂರವಿರಿ, ಕೈಯನ್ನು ಗಂಟೆಗೊಮ್ಮೆ ತೊಳೆದುಕೊಳ್ಳಿ, ತಮ್ಮ ವೃತ್ತಿಯನ್ನು ಮುಗಿಸಿದ ಬಳಿಕ ಮನೆಗೆ ಹೋದಾಗ ಕೈಕಾಲು ತೊಳೆದುಕೊಂಡು ತಮ್ಮ ಕೈಗಳಿಗೆ, ರಿಕ್ಷಾಗೆ ಸ್ಯಾನಿಟೈಸರ್ ಮಾಡುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಹೇಳಿದರು.
ಈ ಸಂದರ್ಭ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಪೂಂಜಾ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಠಾರಿ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ರಾವ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *