Header Ads
Breaking News

ಸುರತ್ಕಲ್‍ನ ಲಯನ್ಸ್ ಕ್ಲಬ್‍ನಿಂದ ನೆರವಿನ ಹಸ್ತ : ಸುರತ್ಕಲ್ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಹಸ್ತಾಂತರ

ಸುರತ್ಕಲ್‍ನ ಲಯನ್ಸ್ ಕ್ಲಬ್ ವತಿಯಿಂದ ಸುರತ್ಕಲ್ ಪ್ರಾಥಾಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಹಸ್ತಾಂತರಿಸಲಾಯಿತು. ಶಾಸಕ ಡಾ. ಭರತ್ ಶೆಟ್ಟಿಯವರು ಆಂಬುಲೆನ್ಸ್ ಹಸ್ತಾಂತರಿಸಿ ಮಾತನಾಡಿ, ಕೊರೊನಾ ಸೋಂಕಿತನನ್ನು ಚಿಕಿತ್ಸೆಗೆ ಕರೆದೊಯ್ಯಲು ಆಂಬುಲೆನ್ಸ್ ನೀಡಲಾಗುತ್ತಿದೆ. ಹಲವಾರು ಕಡೆ ಸೋಂಕಿತರನ್ನುಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಸೋಂಕಿತರನ್ನು ಶೀಘ್ರ ಗುಣಪಡಿಸಲು ಆತನಿಗೆ ಮಾನಸಿಕ ಸ್ಥೈರ್ಯ ತುಂಬಬೇಕು ಹೊರತು ತಿರಸ್ಕಾರ ಅಲ್ಲ ಅಂತ ಹೇಳಿದ್ರು. ಈ ಸಂದರ್ಭದಲ್ಲಿ ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಗುಣವತಿ ರಮೇಶ್, ಉಪಮೇಯರ್ ವೇದಾವತಿಯ, ಲಯನ್ಸ್ ಕ್ಲಬ್‍ನ ವಿಶ್ವನಾಥ್ ಶೆಟ್ಟಿ, ಡಾ ಟಿ.ಆರ್ ಶೆಟ್ಟಿ, ಮೊಯಿದ್ದೀನ್ ಕುಂಞ, ಮನಪಾ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *