

ಮಂಗಳೂರಿನ ಸುರತ್ಕಲ್ನ ಟೋಲ್ ಸಿಬ್ಬಂದಿಗೆ ಏಳು ಮಂದಿ ಕಾರು ಸವಾರರು ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ. ಭಟ್ಕಳ ರಿಜಿಸ್ಟ್ರೇಷನ್ ನಂಬರ್ ನ ಕಾರು ಸುರತ್ಕಲ್ ಟೋಲ್ ನಲ್ಲಿ ಹಣ ಪಾವತಿಸಲು ನಿರಾಕರಿಸಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಹಣ ಪಾವತಿಸಲು ತಿಳಿಸಿದ್ದು,ಹಣ ಪಾವತಿ ಮಾಡೋದಿಲ್ಲ ಎಂದು ತಗಾದೆ ತೆಗೆದು ಟೋಲ್ ಸಿಬ್ಬಂದಿಗೆ ಏಳು ಮಂದಿ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಟೋಲ್ ಸಿಬ್ಬಂದಿಯ ಕೈ ಮುರಿತಕ್ಕೊಳಗಾಗಿದ್ದು, ಬಳಿಕ ಹಲ್ಲೆ ನಡೆಸಿದ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯ ಟೋಲ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಬಗ್ಗೆ ಎನ್ಹೆಚ್ಎಐ ಟೋಲ್ ಸಿಬ್ಬಂದಿಗಳು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪ್ರಕರಣ ದಾಖಲಾಗಿದೆ.