Breaking News

ಸುರತ್ಕಲ್ ಎನ್‌ಎಚ್‌ನ ಚರಂಡಿಯ ಅರೆಬರೆ ಕಾಮಗಾರಿ, ಮಳೆಯಲ್ಲಿ ವಾಹನ ಸವಾರರಿಗೆ ಕಂಟಕ


ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಓವರ್‌ಬ್ರಿಡ್ಜ್ ಕೆಳಗೆ ಹಾಗೂ ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿದ್ದಾರೆ. ಆದರೆ ಇದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಕಂಟಕವಾಗಿ ಪರಿಣಮಿಸಿದೆ.
ಮಳೆಗಾಲ ಆರಂಭವಾದಾಗಲೇ ಸಮಸ್ಯೆಗಳು ಉದ್ಘವವಾಗುತ್ತಿರುವುದು ಮತ್ತು ಜನರಿಗೆ ಸಮಸ್ಯೆಗಳಾಗುತ್ತಿರುವ ದೃಶ್ಯವನ್ನು ಕಾಣುತ್ತಿದ್ದೇವೆ. ಅಂತಹದೇ ಒಂದು ಸಮಸ್ಯೆ ಇದೀಗ ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕಂಡುಬರುತ್ತಿದೆ. ಮಳೆ ನೀರು ಹರಿದು ಹೋಗಲು ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಮಾಡುತ್ತಿದ್ದಾರೆ. ಆದರೆ ಇದೀಗ ಅರೆಬರೆ ಕಾಮಗಾರಿ ನಡೆಸಿ ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.

Related posts

Leave a Reply