Header Ads
Header Ads
Breaking News

ಸುರತ್ಕಲ್ ಕಾನಾ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಜತೆ ಶಾಸಕ ಮೊಯ್ದಿನ ಬಾವಾ ಪರಿಶೀಲನೆ

ಸುರತ್ಕಲ್ ಕಾನಾ ವ್ಯಾಪ್ತಿಯಲ್ಲಿ ಮುಂಜಾನೆ ಭಾರೀ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತಿದ್ದು ಶಾಸಕ ಮೊಯಿದೀನ್ ಬಾವಾ ಗುರುವಾರ ಮುಂಜಾನೆ ಬಿ‌ಎ‌ಎಫ್,
ಎಚ್‌ಪಿಸಿ ಎಲ್, ಎಂಆರ್‌ಪಿ‌ಎಲ್ ಮತ್ತಿತರೆಡೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ಎನ್ ಐಟಿ ಕೆ ತಜ್ಜ ಅಧಿಕಾರಿಗಳ ಜತೆಗೂಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳೀಯ ಜನತೆಯು ಅಸಾಧ್ಯ ದುರ್ವಾಸನೆ ಬರುತ್ತಿರುವ ಬಗ್ಗೆ ಶಾಸಕರಲ್ಲಿ ದೂರಿಕೊಂಡರು. ಮಾಲಿನ್ಯ ನಿಯಂತ್ರಣ ತಡೆಗೆ ಇದೀಗ ವಿಶೇಷ ಸಭೆ ನಡೆಸಲು ನಿರ್ಧರಿಸಲಾಗಿದ್ದು ಬರುವ ಗುರುವಾರ ಎಲ್ಲಾ ಕಂಪನಿಗಳ ಅಧಿಕಾರಿಗಳ ಸಭೆ ಕರೆದು ಎಚ್ಚರಿಕೆ ನೀಡಲು ನಿರ್ಧರಿಸಲಾಗಿದೆ. ರಾಜಶೇಖರ ಪುರಾಣಿಕ್,ಶ್ರೀನಿಕೇತನ್, ಜಯಪ್ರಕಾಶ್,ಲಕ್ಷ್ಮೀಶ್ ಮತ್ತಿತರರು ಉಪಸ್ಥಿತರಿದ್ದರು.
ವರದಿ ಶರತ್

Related posts

Leave a Reply