Header Ads
Breaking News

ಸುರತ್ಕಲ್ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ : ಭಜನಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ

ಸುರತ್ಕಲ್ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ವಿವಿಧ ಸಂತ ಮಂಡಳಿಗಳ ಭಜನಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಒಂದು ಊರಿನ ಸ0ಸ್ಕಾರ ತಿಳಿಯಬೇಕಾದರೆ ಅಲ್ಲಿಯ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಆಗ ಮಾತ್ರ ಅಲ್ಲಿನ ಸ0ಸ್ಕøತಿಯ ಅರಿವಾಗುತ್ತದೆ. ಭಜನೆಯ ಅರ್ಥವನ್ನು ತಿಳಿದುಕೊಂಡು ಭಜಿಸಿದಾಗ ಭಜನೆಗಗೆ ಪ್ರಾಮುಖ್ಯತೆ ಸಿಗುತ್ತದೆ ಎಂದರು. ಪ್ರಸ್ತಾವಿಕ ಮಾತುಗಳನ್ನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧಮೇರ್ಂದ್ರ ಗಣೇಶಪುರ ಅವರು ದೇಗುಲದಲ್ಲಿ ಇದೀಗ ಸುಮಾರು 2 ಕೋಟಿ ವೆಚ್ಚದಲ್ಲಿ ದೇವಸ್ಥಾನ ಕಾಮಗಾರಿ ನಡೆಯುತ್ತಿದೆ. ದೇಗುಲದ ಕಾಮಗಾರಿ ಕಾರ್ಯಗಳಿಗೆ ಸರಕಾರ ಮಾತ್ರವಲ್ಲದೇ ಸಾರ್ವಜನಿಕರ ಮುಖಾಂತರ ದೇಣಿಗೆಯನ್ನು ಅಪೇಕ್ಷಿಸುತ್ತೇವೆ ಎಂದ್ರು. ಕೃಷ್ಣ ಹೆಬ್ಬಾರ್, ನಂದಗೋಕುಲ ವಿಶ್ವನಾಥ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ನಿರಂಜನ್ ಹೊಳ್ಳ ಕೃಷ್ಣಪುರ, ದೀನನಾಥ್ ಶೆಟ್ಟಿಗಾರ್, ಪ್ರಾಧ್ಯಾಪಕ ರಾಮಚಂದ್ರ ಶೆಟ್ಟಿಗಾರ್, ಸದಸ್ಯ ಚಂದ್ರಹಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *