
ಕೊರೊನಾ ಹೊಡೆತದಿಂದ ದೇಶ ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರೂ ಇದೀಗ ದೇಶದಲ್ಲಿ ವ್ಯಾಕ್ಸಿನ್ ಬಳಕೆ ಆರಂಭವಾಗಿರುವುದರಿಂದ 2ನೇ ಕೊರೊನಾ ಅಲೆಯನ್ನು ನಿಭಾಯಿಸಲು ದೇಶ ಸಶಕ್ತವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಅವರು ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ವಿರುದ್ದ ಆರಂಭವಾದ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಜನರ ಸೇವೆಗೈಯುವ ಕೊರೊನಾ ವಾರಿಯರ್ಸ್ ಗೆ ಪ್ರಥಮ ಆದ್ಯತೆ ನೀಡುವ ದೇಶದ ಪ್ರಧಾನಿಗಳು ಹಂತ ಹಂತವಾಗಿ ಸರ್ವರಿಗೂ ವ್ಯಾಕ್ಸಿನ್ ದೊರಕುವಂತಾಗಲು ಕ್ರಮ ಕೈಗೊಳ್ಳಲಾಗಿದೆ ಎಂದ್ರು.
ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿಯ ಒಟ್ಟು 100 ಮಂದಿಗೆ ಕೊರಿನಾ ಲಸಿಕೆ ಹಾಕಲಾಯಿತು. ಮುಂಜಾಗ್ರತಾ ಕ್ರಮವಾಗಿ ಲಸಿಕೆ ನಿಗಾ ಘಟಕ,ಆಕ್ಸಿಜನ್ ವ್ಯವಸ್ಥೆ,ಅಂಬುಲೆನ್ಸ್ ಮತ್ತಿತರ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಈ ವೇಳೆ ಪಾಲಿಕೆ ಸದಸ್ಯ ರಾದ ನಯನ ಕೋಟ್ಯಾನ್, ಸರಿತ ಶಶಿಧರ್, ಶೋಭಾ ರಾಜೇಶ್, ಲಕ್ಷ್ಮೀ ಶೇಖರ್ ದೇವಾಡಿಗ, ಶ್ವೇತಾ ಪೂಜಾರಿ, ಶಂಶಾದ್, ಜಿಲ್ಲಾ ಮಲೇರಿಯಾ ನಿಯಂತ್ರಣ ವಿಭಾಗದ ಡಿಎಂಒ ಡಾ. ನವೀನ್ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.