Header Ads
Breaking News

ಸುರತ್ಕಲ್ ಬಂಟರ ಭವನ ಬಳಿ ಹರಿಯುವ ರಾಜಕಾಲುವೆ ತಡೆಗೋಡೆ ನಿರ್ಮಾಣ : ಶಾಸಕ ಡಾ. ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ

ಸುರತ್ಕಲ್ ಬಂಟರ ಭವನ ಬಳಿ ಹರಿಯುವ ಪ್ರಧಾನ ರಾಜಕಾಲುವೆಗೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಲಾಗಿದ್ದು 1 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 12.50 ಕೋಟಿ ರೂ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಲಾಗಿದೆ. ಕಿರು ಕಿಂಡಿ ಅಣೆಕಟ್ಟು ಸಹಿತ ವಿವಿಧೆಡೆ ಹಂಚಿಕೆ ಮಾಡಲಾಗುವುದು. ಈ ಪ್ರದೇಶದಲ್ಲಿ ಕೃತಕ ನೆರೆಹಾವಳಿಯಿಂದ ಹಲವಾರು ಮನೆಗಳಿಗೆ ಸಮಸ್ಯೆಯಾಗುತ್ತಿತ್ತು. ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ ಅವರ ಮನವಿ ಮೇರೆಗೆ ಹಾಗೂ ಸ್ಥಳೀಯರ ಅಹವಾಲು ಪರಿಗಣಿಸಿ ಈ ಕಾಮಗಾರಿಗೆ ಅನುದಾನ ತರಲಾಗಿದೆ ಎಂದರು.

ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ ಅವರು ಸಮಸ್ಯೆಗೆ ಸ್ಪಂದಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಮನಪಾ ಸದಸ್ಯರಾದ ಶ್ವೇತ ಪೂಜರಿ,ಸರಿತ ಶಶಿಧರ್, ನಯನ ಕೋಟ್ಯಾನ್, ವರುಣ್ ಚೌಟ, ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *