Header Ads
Header Ads
Breaking News

ಸುರತ್ಕಲ್ ಬೀಚ್‌ರೋಡ್ ರಾತ್ರಿ ಸಮಯದಲ್ಲಿ ರಸ್ತೆ  ಅಗೆತ

ಸುರತ್ಕಲ್‌ನ ಲೈಟ್‌ಹೌಸ್ ಬೀಚ್ ರಸ್ತೆಯನ್ನು ಅಗೆದು ಹಾಕಿದ್ದು ಇದರಿಂದ ಸ್ಥಳೀಯರಿಗೆ ಸಂಚರಿಸಲು ಕಷ್ಟ ಸಾಧ್ಯವಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಪಿಡಬ್ಲ್ಯುಡಿ ಅವರು ಹೊಸದಾಗಿ ನಿಮಿಸಿದ್ಧ ರಸ್ತೆಯನ್ನು ದುಷ್ಕರ್ಮಿಗಳು ಅಗೆದು ಹಾಕಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ರಾತ್ರಿ ಸಮಯದಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದ್ದು ಟೋಲ್ ಸಿಬ್ಬಂದಿಗಳು ರಸ್ತೆಯನ್ನು ಅಗೆದು ಹಾಕಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ರೇವತಿ ಅವರು ಮಾತನಾಡಿ, ರಸ್ತೆ ಅಗೆದ ಬಗ್ಗೆ ದೂರು ನೀಡಲಾಗಿದೆ ಎಂದರು.
ವರದಿ: ಶರತ್

Related posts

Leave a Reply