Header Ads
Breaking News

ಸುರತ್ಕಲ್ ಮುಕ್ಕದಲ್ಲಿ ಅಕ್ರಮ ಮರಳುಗಾರಿಕೆ : ಅಪಾರ ಪ್ರಮಾಣದ ಸೊತ್ತು ವಶಕ್ಕೆ

ನಗರದ ಹೊರವಲಯದ ಸುರತ್ಕಲ್ ಮುಕ್ಕ ಎಂಬಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಅಧಿಕಾರಿಗಳು ಅಪಾರ ಪ್ರಮಾಣದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ. ಎಸ್‍ಇಝೆಡ್ ವಲಯದಲ್ಲಿ ಅನಧಿಕೃತವಾಗಿ ಮರಳುಗಾರಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಅಡ್ಡೆಗೆ ದಾಳಿ ನಡೆಸುತ್ತಿದ್ದಂತೆ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸೊತ್ತನ್ನು ಮುಂದಿನ ಕ್ರಮಕ್ಕೆ ಸುರತ್ಕಲ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ನವೀನ್‍ಕುಮಾರ್, ತಹಶೀಲ್ದಾರ್ ಗುರುಪ್ರಸಾದ್, ಗ್ರಾಮ ಕರಣಿಕ, ಸುರತ್ಕಲ್ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *