

ಮಂಗಳೂರು: ಮಂಗಳೂರಿನ ಎನ್ಐಟಿಕೆ ಸುರತ್ಕಲ್ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನಧಿಕೃತ ಟೋಲ್ ಸಂಗ್ರಹವನ್ನು ಕೂಡಲೇ ನಿಲ್ಲಿಸಬೇಕೆಂದು ಮಂಗಳೂರಿನ ನಾಗರಿಕರು ಒಕ್ಕೂಟ ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿತ್ತು,
ಈ ಮನವಿಯಲ್ಲಿ ಸುರತ್ಕಲ್ ಎನ್ಐಟಿಕೆ ಕಾಲೇಜಿನ ಎದುರು ಇರೋ ಟೋಲ್ ಸಂಗ್ರಹ ಕೇಂದ್ರವನ್ನು ಕೂಡಲೇ ರದ್ದು ಪಡಿಸಬೇಕು.ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಈವರೆಗೆ ಅನಧಿಕೃತವಾಗಿ ಸಂಗ್ರಹಿಸಿರೋ ಹಣವನ್ನು ಮಂಗಳೂರು ಮಹಾನಗರ ಪಾಲಿಕೆಯ ಖಾತೆಗೆ ವರ್ಗಾಯಿಸಿ ಆ ಹಣವನ್ನು ರಸ್ತೆಯ ಇಕ್ಕೆಲಗಳಲ್ಲಿರೋ ರಸ್ತೆ ಹಾಗೂ ನಗರ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ದೀಪವನ್ನು ಅಳಪಡಿಸಬೇಕೆಂದು ಮನವಿ ಮೂಲಕ ಒತ್ತಾಯಿಸಲಾಯ್ತು. ಮಂಗಳೂರಿನ ನಾಗರಿಕರು ಒಕ್ಕೂಟದ ಯತೀಶ್ ಬೈಕಂಪಾಡಿ, ಮಹಾಬಲ ರೈ, ದಿನಕರ್ ಮಿತ್ರಪಟ್ಣ, ಅಲೋಶಿಯಸ್ ಮೊಂತೆರೋ, ಪ್ರಶಾಂತ್ ಕಾಂಚನ್, ಎಮ್.ಜಿ. ರಾಮಚಂದ್ರ, ಹರುಷ್ ಐತಾಳ್, ಅರ್ಜುನ್ ಮಸ್ಕರೇನಸ್ ಉಪಸ್ಥಿತರಿದ್ದರು.