Header Ads
Header Ads
Breaking News

ಸುರತ್ಕಲ್ ಹಳೆ ಮಾರುಕಟ್ಟೆ ತೆರವು ಕಾರ್ಯಾಚರಣೆ ಇಂದು ಬೆಳಗ್ಗಿನಿಂದಲೇ ಕಾರ್ಯಾಚರಣೆ ತಾತ್ಕಾಲಿಕ ಮಾರುಕಟ್ಟೆಗೆ ತೆರಳದ ವರ್ತಕರು ಅಧಿಕಾರಿಗಳ ಮತ್ತು ವರ್ತಕರ ನಡುವೆ ಮಾತಿನ ಚಕಮಕಿ

ಸುರತ್ಕಲ್‌ನ ಕೇಂದ್ರ ಮೈದಾನದಲ್ಲಿ ನಿರ್ಮಿಸಲಾಗಿರುವ ತತ್ಕಾಲಿಕ ಮಾರುಕಟ್ಟೆಗೆ ವರ್ತಕರ ಸ್ಥಳಾಂತರ ಆರಂಭವಾಗಿದೆ. ಭಾರಿ ವಿವಾದ ಸೃಷ್ಠಿಸಿರುವ ಈ ಯೋಜನೆ ಮಟ್ಟಿಗೆ ಹೊಸ ಬೆಳವಣಿಗೆ ಎಂದೇ ಉಲ್ಲೇಖಿಸಲಾಗುತ್ತಿದೆ. ಇಂದು ಹಳೆ ಮಾರುಕಟ್ಟೆಯ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಅಧಿಕಾರಿಗಳ ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು.

ಹಳೆ ಮಾರುಕಟ್ಟೆಯಿಂದ ಹತ್ತು ಮಂದಿ ವರ್ತಕರು ಸ್ವ ಇಚ್ಚೆಯಿಂದ ಸ್ಥಳಾಂತಗೊಂಡಿದ್ದಾರೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿ 145 ಅಂಗಡಿ ನಿರ್ಮಿಸಲಾಗಿದೆ. ಹಳೇ ಮಾರುಕಟ್ಟೆಯಿಂದ 109, ಪಕ್ಕದ ಹೊಸ ಮಾರುಕಟ್ಟೆಯಿಂದ 121 ಅಂಗಡಿಗಳ ವರ್ತಕರನ್ನು ಇಲ್ಲಿಗೆ ಸ್ಥಳಾಂತರಿಸಲು ಯೋಜೆನ ಪ್ರಸ್ತಾಪಿಸಲಾಗಿದೆ. ತಾತ್ಕಾಲಿಕ ಮಾರುಕಟ್ಟೆ ಸ್ಥಳಾಂತರಕ್ಕೆ ವರ್ತಕರ ಪ್ರತಿಕ್ರಿಯೆ ಗೊಂದಲ ಸೃಷ್ಠಿಸಿದೆ. ಇದೀಗ ಮೈದಾನದಲ್ಲಿರುವ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಕ್ಕೆ ವರ್ತಕರು ಹೋಗದೇ ಪಟ್ಟು ಹಿಡಿದು ಕುಳಿತ್ತಿದ್ದಾರೆ.