Header Ads
Breaking News

ಸುರತ್ಕಲ್ : ಹುತಾತ್ಮ ಯೋಧರಿಗೆ ನುಡಿನಮನ ಸಲ್ಲಿಕೆ

ಛತ್ತೀಸ್‍ಗಢದಲ್ಲಿ ನಕ್ಸಲರ ದಾಳಿಗೆ ಬಲಿಯಾದ ನಕ್ಸಲ್ ಕೂಬಿಂಗ್ ಭದ್ರತಾ ಪಡೆಯ ಜವಾನರಿಗೆ ಶ್ರದ್ಧಾಂಜಲಿ, ನುಡಿ ನಮನ ಕಾರ್ಯಕ್ರಮ ಸುರತ್ಕಲ್ ಜಂಕ್ಷನ್‍ನಲ್ಲಿ ಜರುಗಿತು.


ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ನುಡಿ ನಮನ ಸಲ್ಲಿಸಿ ನಕ್ಸಲರು ಮೂಲಸೌಕರ್ಯ ಬೇಡಿಕೆ ಮಂಡಿಸಿ ಹೋರಾಟ ಮಾಡುತ್ತಾರೆ. ಆದರೆ ಸರಕಾರ ಬುಡಕಟ್ಟು ಪ್ರದೇಶಗಳಿಗೆ ಅಭಿವೃದ್ಧಿ ಮಾಡಲು ಹೋದರೆ ಇದೇ ನಕ್ಸಲರು ಅಡ್ಡಿ ಪಡಿಸುತ್ತಾರೆ. ಒಂದು ಪ್ರದೇಶವನ್ನು ಮನಬಂದಂತೆ ಹಿಡಿತದಲ್ಲಿಟ್ಟುಕೊಳ್ಳುವುದು ಇದರ ಉದ್ದೇಶ. ಹೀಗಾಗಿ ದೇಶದ ಭದ್ರತ ಪಡೆಯ ಸಿಬ್ಬಂದಿ ಹತ್ಯೆಗೈದ ನಕ್ಸಲರನ್ನು ಬುಡಸಮೇತ ನಿರ್ಮೂಲನೆಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಶ್ರೀಕಾಂತ್ ಶೆಟ್ಟಿ ಬಾಳ, ಲೀಲಾಧರ್ ಕಡಂಬೋಡಿ, ಎಂ.ಸಿ. ಭದ್ರಯ್ಯ, ಸದಾಶಿವ ಮುಂಚೂರು, ಮಹಾಬಲ ಪೂಜಾರಿ ಕಡಂಬೋಡಿ, ರಜನಿ ದುಗ್ಗಣ್ಣ, ಮಹೇಶ್ ಮೂರ್ತಿ, ಸದಾಶಿವ ಪ್ರಭಾಕರ್, ಸತೀಶ್ ಮುಂಚೂರು, ಲೋಕೇಶ್ ಕೋಡಿಕೆರೆ, ದೀಪಕ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *