Header Ads
Header Ads
Breaking News

ಸುರಿಬೈಲು ಉಸ್ತಾದ್ 17 ನೇ ಆಂಡ್ ನೇರ್ಚೆ:ಜ.4ರಂದು ಸಂದಲ್ ಮೆರವಣಿಗೆ ಸೌಹಾರ್ದ ಸಂಗಮ.

ಮಂಜೇಶ್ವರ : ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದ್ 17 ನೇ ಆಂಡ್ ನೇರ್ಚೆ ಜನವರಿ 3 ಮತ್ತು 4ರಂದು ನಡೆಯಲಿದೆಯೆಂದು ಸಂಘಟಕರು ತಿಳಿಸಿದ್ದಾರೆ. ಇಂದು ಸಂಜೆ ನಡೆಯುವ ಮಖ್‌ಬರ ಝಿಯಾರತ್‌ಗೆ ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಮಾರ್ ನೇತೃತ್ವ ನೀಡುವರು. ಬಳಿಕ ದ್ವಜಾರೋಹಣ ಹಾಗೂ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ನಡೆಯಲಿದೆ.

ಈ ಬಗ್ಗೆ ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘಟಕರು ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಘಳ್ ದುಆಗೆ ನೇತೃತ್ವ ನೀಡುವರು. ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ. ರಾತ್ರಿ 9 ಘಂಟೆಗೆ ಮೌಲಾನಾ ಲತೀಫ್ ಸಅದಿ ಪಯಶ್ವಿ ಮುಖ್ಯ ಭಾಷಣ ಮಾಡುವರು.

ಜನವರಿ4 ರಂದು ಶುಕ್ರವಾರ ಜುಮುಅ ನಮಾಜಿನ ಬಳಿಕ ನಡೆಯುವ ಖತಮುಲ್ ಖುರಾನ್ ಗೆ ಸಯ್ಯಿದ್ ಇಬ್ರಾಹಿಂ ಪೂಕುಂಞಿ ತಂಘಳ್ ನೇತೃತ್ವ ನೀಡುವರು. ಬಳಿಕ ಸಂದಲ್ ಮೆರವಣಿಗೆ ಸೌಹಾರ್ಧ ಸಂಗಮ ನಡೆಯಲಿದೆ. 6.30 ಕ್ಕೆ ಆಂಡ್ ನೇರ್ಚೆ ಹಾಗೂ ಸಮಾರೋಪ ಮಹಾ ಸಮ್ಮೇಳನ ನಡೆಯಲಿದೆ. ಸಯ್ಯಿದ್ ಜಲಾಲುದ್ದೀನ್ ತಂಘಳ್ ಮಳ್‌ಹರ್ , ಅಶ್ರಫ್ ತಂಘಳ್ ಆದೂರು , ಶಿಹಾಬುದ್ದೀನ್ ತಂಘಳ್ ತಲಕ್ಕಿ , ಖಾಸಿಂ ತಂಘಳ್ ಸೇರಿದಂತೆ ಹಲವು ಘಣ್ಯರು ಉಪಸ್ಥಿತರಿರುವರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಫಾರೂಕ್ ಅಶ್ಹರಿಯ್ಯಾ , ಬೊಳ್ಮಾರ್ ಉಸ್ತಾದ್ , ಮೊಹಮ್ಮದ್ ಅಲೀ ಸಖಾಫಿ, ಹಾರಿಸ್ ಹನೀಫಿ ಬಾಳಿಯೂರು, ಮೊಹ್ಮಮದ್ ಸಖಾಫಿ ತೋಕೆ ಉಪಸ್ಥಿತರಿದ್ದರು.

Related posts

Leave a Reply