Header Ads
Breaking News

ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನಲ್ಲಿ ‘ವಿಶ್ವರತ್ನ’ ಅಂತಾರಾಷ್ಟ್ರೀಯ ಎಕ್ಸಿಬಿಷನ್

ಪೊಲ್ಕಿ ಡೈಮಂಡ್ಸ್ ಜುವೆಲರಿ, ಅಮೂಲ್ಯ ಹರಳುಗಳ ಆಭರಣ, ಆನ್‌ಕಟ್ ಡೈಮಂಡ್ಸ್ , – ಚಿನ್ನದ ವಿಶ್ವರತ್ನ ಎಂಬ ಅಂತಾ ರಾಷ್ಟ್ರೀಯ ಪ್ರದರ್ಶನ ಮತ್ತು ಮಾರಾಟವನ್ನು ನಗರದ ಕಂಕನಾಡಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಶೋರೂಮ್‌ನಲ್ಲಿ ಆಯೋಜಿಸಲಾಗಿದೆ. ಇಂದಿನಿಂದ ಜೂನ್ ೩೦ರವರೆಗೆ ಏರ್ಪಡಿಸಲಾಗಿದೆ.

 ಈಗಾಗಲೇ ಡೈಮಂಡ್ಸ್ ಆಂಡ್ ಗೋಲ್ಡ್‌ನಲ್ಲಿ ಮಾರಾಟಕ್ಕೆ ಹೆಸ್ರು ಪಡೆದಿರುವ ಮಂಗಳೂರಿನ ಕಂಕನಾಡಿಯಲ್ಲಿರುವ ‘ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್’ ಶೋರೂಮ್‌ನಲ್ಲಿ ಪೊಲ್ಕಿ ಡೈಮಂಡ್ಸ್ ಜುವೆಲ್ಲರಿ, ಅಮೂಲ್ಯ ಹರಳುಗಳ ಆಭರಣ, ಅನ್‌ಕಟ್ ಡೈಮಂಡ್ಸ್‌ಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ವಿಶ್ವರತ್ನ’ ಎನ್ನುವ ಹೆಸರಿನಲ್ಲಿ ನಡೆಯುತ್ತಿದೆ. ಇಂದಿನಿಂದ ಜೂನ್ 30ರವರೆಗೆ ನಡೆಯಲಿರುವ ‘ವಿಶ್ವರತ್ನ’ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಮಾರಾಟಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ|ಎಂ.ಮೋಹನ್ ಆಳ್ವ ಚಾಲನೆ ನೀಡಿದ್ರು. ಈ ವೇಳೆ ಸುಲ್ತಾನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎಂ. ಅಬ್ದುಲ್ ರವೂಫ್ ಅವರು ಗಣ್ಯರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಡಾ.ಎಂ. ಮೋಹನ್ ಆಳ್ವ ಅವರು, ‘ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್’ ಸಂಸ್ಥೆಯು ಭಾರತವಲ್ಲದೆ ವಿದೇಶದಲ್ಲೂ ಮನೆಮಾತಾಗಿದೆ. ವ್ಯವಹಾರದ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಒಂದು ಸಾವಿರ ಸಿಬ್ಬಂದಿ ವರ್ಗಕ್ಕೆ ನೌಕರಿ ನೀಡುವುದು ಕೂಡ ಕ್ರಾಂತಿಕಾರಿ ಹೆಜ್ಜೆಯಾಗಿದೆ ಅಂತಾ ತಿಳಿಸಿದರು.

ಬಳಿಕ ಮಿಸ್ಬಾ ವಿಮೆನ್ಸ್ ಕಾಲೇಜಿನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಮಾತನಾಡಿ, ‘ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್’ ಸಂಸ್ಥೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದೆ. ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಅಂತಾ ತಿಳಿಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ತುಂಬೆ ಬಿ.ಎ. ಗ್ರೂಪ್‌ನ ಆಡಳಿತ ನಿರ್ದೇಶಕ ಬಿ. ಅಬ್ದುಲ್ ಸಲಾಂ, ಹಜಾಜ್ ಗ್ರೂಪ್‌ನ ಹನೀಫ್, ಹಾಜಿ ಗೋಳ್ತಮಜಲು, ಸಿಂಗಾರಿ ಬೀಡಿಯ ಮಾಲಕ ಸುಲೈಮಾನ್ ಹಾಜಿ ನಾರ್ಶ, ಮುಕ್ಕ ಸೀ ಪುಡ್‌ನ ನಿರ್ದೇಶಕ ಆರೀಫ್, ಎಚ್‌ಎನ್‌ಜಿಸಿ ಬಿಲ್ಡರ್‍ಸ್ ಆಂಡ್ ಡೆವಲಪರ್‍ಸ್‌ನ ಅಹ್ಮದ್ ಮನ್ಸೂರ್, ಇಂಟಕ್ ರಾಜ್ಯ ಕಾರ್ಯದರ್ಶಿ ಕೆ.ಎಸ್.ಅಮೀರ್ ಅಹ್ಮದ್ ತುಂಬೆ, ಹಸೀನಾ ನೌಫಲ್ ಯೆನೆಪೊಯ, ಡಾ. ಕವಿತಾ ಡಿಸೋಜ, ಅರುಣಾ ಎಸ್.ಶೆಟ್ಟಿ, ಶಹನಾಝ್ ಬೇಗಂ, ಸಫಿಯಾ ಮುಹಮ್ಮದ್, ಡಾ. ಆರ್. ಪುರುಷೋತ್ತಮ್, ಜಮೀಲಾ ರಶೀದ್ ಭಾಗವಹಿಸಿದರು.

ಪೊಲ್ಕಿ ಡೈಮಂಡ್ಸ್ ಸಹಿತ ಪ್ರದರ್ಶನಗೊಳ್ಳುವ ಆಭರಣಗಳು ಅತ್ಯಾಧುನಿಕ ವಿನ್ಯಾಸದೊಂದಿಗೆ ರೂಪುಗೊಂಡಿವೆ. ದುಬೈ, ಇಸ್ತಾಂಬುಲ್, ಹಾಂಗ್‌ಕಾಂಗ್‌ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಜುವೆಲ್ಲರಿ ಶೋಗಳಲ್ಲಿ ಕೂಡ ಇವುಗಳು ಪ್ರದರ್ಶನಗೊಂಡಿವೆ. ನೀಲ, ಪಚ್ಚೆ ಸಹಿತ ನವರತ್ನಗಳು ಇತ್ಯಾದಿಗಳ ಅಪಾರ ಸಂಗ್ರಹ ಇಲ್ಲಿದೆ. ಪಾರ್ಟಿವೇರ್, ಬ್ರೈಡಲ್‌ವೇರ್, ಡೈಲಿವೇರ್, ಆಫೀಸ್‌ವೇರ್ ಮುಂತಾದ ಆಭರಣಗಳು ವಿಶೇಷ ಆಕರ್ಷಣೆಯೂ ಇದೆ. ಜೂ.30ರವರೆಗೆ 1 ಕ್ಯಾರಟ್ ವಜ್ರದಲ್ಲಿ 6500 ರೂ. ಸಹಿತ ವಿವಿಧ ಖರೀದಿಗೆ ವಿವಿಧ ರಿಯಾಯಿತಿ ಕೊಡುಗೆಯೂ ಇದೆ. ಸುಲ್ತಾನ್ ಡೈಮಂಡ್ಸ್‌ನ ನೂತನ ಶೋರೂಮ್ ಶೀಘ್ರದಲ್ಲಿ ಸುರತ್ಕಲ್-ಎಚ್‌ಎನ್‌ಜಿಸಿ ಮಾಲ್‌ನಲ್ಲಿ ಆರಂಭಗೊಳ್ಳಲಿದೆ. ಇದು ಆರನೇಯ ವರ್ಷದ ಪ್ರದರ್ಶನವಾಗಿದೆ. ಪೊಲ್ಕಿ ಡೈಮಂಡ್ಸ್‌ನ ತಯಾರಿ ವೆಚ್ಚದಲ್ಲಿ ಶೇ.25 ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

Related posts

Leave a Reply

Your email address will not be published. Required fields are marked *