Header Ads
Header Ads
Breaking News

ಸುಳ್ಯ:ಚೈತ್ರಾ ಕುಂದಾಪುರ ಮತ್ತು ತಂಡಕ್ಕೆ ಷರತ್ತುಬದ್ದ ಜಾಮೀನು

ಸುಳ್ಯ ನ.5: ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಅ.24ರಂದು ನಡೆದ ಘರ್ಷಣೆಗೆ ಸಂಬಂದಿಸಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ಆಕೆಯ ಆರು ಮಂದಿ ಸಹಚರರಿಗೆ ಕೊನೆಗೂ ಜಾಮೀನು ದೊರೆತಿದೆ. ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.ನ.3ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಚೈತ್ರಾ ಕುಂದಾಪುರ ಅನಾರೋಗ್ಯ ನೆಪವೊಡ್ಡಿ ಅಂದು ಹಾಜರಾಗಿರಲಿಲ್ಲ. ಅದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು ಗೈರು ಹಾಜರಿಗೆ ಕಾರಣ ಕೇಳಿದ್ದರು.

ಅಲ್ಲದೆ ಜೈಲು ಸೂಪರಿಡೆಂಟ್ ಹಾಗೂ ಜಿಲ್ಲಾ ವೈದ್ಯಾಧಿಕಾರಿಯನ್ನು ನ.5ರಂದು ಸುಳ್ಯ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ ಆದೇಶಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಚೈತ್ರಾಳನ್ನು ಸರಕಾರಿ ಅಂಬುಲೆನ್ಸ್‍ನಲ್ಲಿ ಕರೆತರುವಂತೆ ಹೇಳಿದ್ದರು. ಸೋಮವಾರ ಬೆಳಗ್ಗೆ ಚೈತ್ರಾ ಕುಂದಾಪುರ ಅಂಬುಲೆನ್ಸ್ ಬದಲಿಗೆ ಟ್ಯಾಕ್ಸಿಯಲ್ಲಿ ನ್ಯಾಯಾಲಯಕ್ಕೆ ಬಂದಿದ್ದರು.

ಇದೇ ವೇಳೆ ನ್ಯಾಯಾಲಯಕ್ಕೆ ಆಗಮಿಸಿದ್ದ ಜೈಲು ಸೂಪರಿಡೆಂಟ್ ಮತ್ತು ವ್ಯೆದ್ಯಾಧಿಕಾರಿಗಳನ್ನು ಕಲಾಪ ಆರಂಭವಾಗುವ ಮೊದಲೆ ನ್ಯಾಯಾಲಯದ ಪ್ರತ್ಯೇಕ ಕೊಠಡಿಗೆ ಕರೆಸಿಕೊಂಡ ನ್ಯಾಯಾಧೀಶರು ಅರ್ಧ ತಾಸು ಅವರಿಬ್ಬರನ್ನು ವಿಚಾರಣೆ ನಡೆಸಿ ಸುಳ್ಯ ನ್ಯಾಯಲಯ ನ. 19ರವರೆಗೆ 14 ದಿನಗಳ ನ್ಯಾಯಂಗ ಬಂಧನವನ್ನು ವಿಧಿಸಿತ್ತು. ಇತ್ತ ಪುತ್ತೂರು ಜಿಲ್ಲಾ ಸತ್ರ ನ್ಯಾಯಲಯದಲ್ಲಿ ಚೈತ್ರಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆದ ಬಳಿಕ ನ್ಯಾಯಧೀಶರು ಷರತ್ತು ಬದ್ದ ಜಾಮೀನು ನೀಡಿದರು

Related posts

Leave a Reply