Header Ads
Header Ads
Breaking News

ಸುಳ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಇಲ್ಲ ಅಂಬೇಡ್ಕರ್ ವೃತ್ತ, ಪ್ರತಿಮೆ ಸ್ಥಾಪನೆಗೆ ಆಗ್ರಹ ಸುಳ್ಯ ಎಸ್.ಸಿ, ಎಸ್.ಟಿ ಕುಂದುಕೊರತೆ ಸಭೆಯಲ್ಲಿ ಒತ್ತಾಯ

ಹಲವು ವರ್ಷಗಳಿಂದ ಮೀಸಲಾತಿ ಕ್ಷೇತ್ರವಾಗಿರುವ ಸುಳ್ಯದಲ್ಲಿ ಅಂಬೇಡ್ಕರ್ ವೃತ್ತ ಆಗಲಿ, ಅಥವಾ ಅಂಬೇಡ್ಕರ್ ಪ್ರತಿಮೆ ಇಲ್ಲ. ಸುಳ್ಯದ ಪೈಚಾರಿನಲ್ಲಿ ಅಂಬೇಡ್ಕರ್ ವೃತ್ತ ಮತ್ತು ಪ್ರತಿಮೆ ಸ್ಥಾಪನೆ ಆಗಬೇಕು ಎಂದು ದಲಿತ ಮುಖಂಡ ಆನಂದ ಬೆಳ್ಳಾರೆ ಆಗ್ರಹಿಸಿದ್ದಾರೆ.

ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಕುಂಞಿಮ್ಮ ಅವರ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ತಾಲೂಕು ಮಟ್ಟದ ಎಸ್.ಸಿ, ಎಸ್.ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು ಸುಳ್ಯದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಮಾಡಬೇಕು ಎಂದು ಕಳೆದ 10 ವರ್ಷಗಳ ಹಿಂದೆ ಮನವಿ ನೀಡಲಾಗಿತ್ತು ಎಂದು ಸಂಜಯ ಪೈಚಾರು ಹೇಳಿದರು. ಅದರೊಂದಿಗೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ತಾಲೂಕು ಅಂಬೇಡ್ಕರ್ ಭವನ ಕೂಡ ಆಗಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ ಸರಕಾರಿ ಜಾಗಗಳು ಶ್ರೀಮಂತರ ಪಾಲಾಗುತ್ತಿದೆ. ಜಾಗ ಇಲ್ಲದ ಬಡವರು ಬಡವರಾಗಿಯೇ ಇದ್ದಾರೆ. ಸರಕಾರಿ ಜಾಗಗಳನ್ನು ಬಡವರಿಹೆ ಹಂಚಿಕೆ ಮಾಡುವ ಕೆಲಸ ಆಗಬೇಕು. ಅಲ್ಲದೇ ಸರಕಾರಿ ಜಾಗ ಅತಿಕ್ರಮಣ ಮಾಡಿಕೊಂಡವರ ವಿರುದ್ದ ಕ್ರಮಕೈಗೊಂಡು ಜಾಗವನ್ನು ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ಕೆ.ಕೆ.ನಾಯ್ಕ ಬೆಳ್ಳಾರೆ ಹೇಳಿದರು. ಬೆಳ್ಳಾರೆಯ ತಡೆಗಜೆಯಲ್ಲಿ ದಲಿತ ವ್ಯಕ್ತಿ ಮೃತ ಪಟ್ಟಾಗ ಆತನನ್ನು ದಹನ ಮಾಡಲು ತಡೆಗಜೆ ಶ್ಮಶಾನದಲ್ಲಿ ಹಲವು ಗಂಟೆಗಳ ಒರಗೆ ಬಿಟ್ಟಿಲ್ಲ.. ಆ ಪ್ರದೇಶದಲ್ಲಿ ಸುಮಾರು 150 ಮನೆಗಳಿಗೆ ಸರಿಯಾದ ಶ್ಮಶಾನ ಇಲ್ಲ. ಅದೇ ಪರಿಸರದಲ್ಲಿ ಸುಮಾರು 50 ಸೆಂಟ್ಸ್ ಜಾಗ ಇದೆ. ಅದರಲ್ಲಿ ಶ್ಮಶಾನ ಆಗಬೇಕು ಎಂದು ಆನಂದ ಬೆಳ್ಳಾರೆ ಹೇಳಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್ ಕುಂಞಿಮ್ಮ, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್ ಪೇರಾಲು, ತಾ.ಪಂ ಮೆನೇಜರ್ ಹರೀಶ್ ಉಪಸ್ಥಿತರಿದ್ದರು.