Header Ads
Header Ads
Breaking News

ಸುಳ್ಯದಲ್ಲಿ ಆದಿ ದ್ರಾವಿಡ ಸಮಾಜಕ್ಕೆ ಅನ್ಯಾಯ: ಆದಿ ದ್ರಾವಿಡ ಸಮಾಜದಿಂದ ಪಕ್ಷೇತರ ಅಭ್ಯರ್ಥಿ ಕಣಕ್ಕೆ

ಸುಳ್ಯ: “ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಮುದಾಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಆದಿದ್ರಾವಿಡ ಸಮಾಜದ ಅಭ್ಯರ್ಥಿಗೆ ಪ್ರಮುಖ ಪಕ್ಷವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಮನ್ನಣೆ ನೀಡದಿರುವುದು ಬೇಸರ ತರಿಸಿದೆ. ಆದ್ದರಿಂದ ಈ ಬಾರಿ ನಮ್ಮ ಸಮಾಜದಿಂದ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಿಲ್ಲಾ ಸಮಿತಿ ನಿರ್ಧರಿಸಿರುವುದಾಗಿ“ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸುಳ್ಯ ಘಟಕದ ಗೌರವಾಧ್ಯಕ್ಷ ಬಾಬು ಕೆ.ಎಂ. ಹಾಗೂ ಅಧ್ಯಕ್ಷ ಮೋನಪ್ಪ ಆರ್.ಬಿ.ಯವರು ಹೇಳಿದ್ದಾರೆ.


ಪತ್ರಿಕಾಗೋಷ್ಠಿ ನಡೆಸಿದ ಅವರು, “ಸುಳ್ಯ ಕ್ಷೇತ್ರದಲ್ಲಿ ನಮ್ಮ ಸಮಾಜದ ಸುಮಾರು ೩೫ ಸಾವಿರ ಮಂದಿ ಮತದಾರರಿದ್ದಾರೆ. ೨೦೦೮ರಲ್ಲಿ ನಮ್ಮ ಸಮಾಜದ ವತಿಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ನಮ್ಮ ಸಮಾಜದ ಅಭ್ಯರ್ಥಿಯನ್ನು ನಿಲ್ಲಿಸುವಂತೆ ಬೇಡಿಕೆ ಇಡುತ್ತಾ ಬಂದಿzವೆ. ಆದರೆ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿಲ್ಲ.. ಆದ್ದರಿಂದ ಈ ಬಾರಿ ನಾವು ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಲಿzವೆ‘’ ಎಂದು ಹೇಳಿದರು.
“ಮೀಸಲಾತಿ ಕ್ಷೇತ್ರದಲ್ಲಿ ಪ್ರಮುಖವಾಗಿ ಆ ಸಮುದಾಯದವರ ಸಮಸ್ಯೆಯನ್ನು ಬಗೆಹರಿಸಬೇಕು. ಅವರಿಗೆ ಸೌಲಭ್ಯ ಒದಗಿಸಬೇಕು. ಜತೆಗೆ ಇತರರಿಗೂ ನೀಡಬೇಕು. ಆದರೆ ಸುಳ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಶಾಸಕರು ಅನುದಾನ ತರಿಸಿದರೆ ದಲಿತರನ್ನು ಕರೆದು ಚರ್ಚಿಸದೇ ಮೇಲ್ವರ್ಗದವರು ಹೇಳಿದಂತೆ ಕೆಲಸ ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಶಾಸಕರಾದವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಮುಖವಾಗಿ ದಲಿತ ಸಮುದಾಯದವರುನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು“ ಕಳೆದ ೨೫ ವರ್ಷಗಳಿಂದ ಶಾಸಕ ಅಂಗಾರರವರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಮೀಸಲು ಕ್ಷೇತ್ರ ಸುಳ್ಯದಲ್ಲಿ ಅಂಬೇಡ್ಕರ್ ಭವನ ಆಗದೇ ಇರುವುದು ಶಾಸಕರ ದೊಡ್ಡ ವೈಫಲ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ವಿಜಯ ಆಲಡ್ಕ, ಸುಂದರ ಎಣ್ಮೂರು, ರಾಮ ಎಣ್ಮೂರು, ರವಿ ನಾವೂರು, ದಾಮೋದರ ಬೇರ್ಯ, ರಮೇಶ್ ಬುಡು, ಶವಣ್, ದಿಲೀಪ್ ಮೊದಲಾದವರಿದ್ದರು.