
ಸುಳ್ಯ: ಶ್ರೀ ಜ್ಞಾನ ಮಂದಾರ ಟ್ರಸ್ಟ್ (ರಿ) ಬೆಂಗಳೂರು ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ-2021″ ಸಮಾಜ ರತ್ನ ರಾಜ್ಯ ಪ್ರಶಸ್ತಿ ಕಾರ್ಯಕ್ರಮವು ಸುಳ್ಯದ ಕೇರ್ಪಳ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನುಸುಳ್ಯ ಅಕಾಡೆಮಿ ಆಫ್ ಲಿಬರಲ್ ಶಿಕ್ಷಣ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ನೆರವೇರಿಸಿದರು.ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಗಣ್ಯರಿಗೆ ಸಮಾಜ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಪಿ.ಸಿ ಜಯರಾಮ,ಸುಭಾಷ್ ಶೆಟ್ಟಿ,ಕೆ.ಟಿ.ವಿಶ್ವನಾಥ, ಡಿ.ವಿ.ಲೀಲಾಧರ್, ಕೆ.ಎಸ್.ಕರೋಡಿ ಗೋಪಾಲಕೃಷ್ಣ, ಸಿದ್ಧಗಂಗಾ ಶ್ರೀ ಪ್ರಶಸ್ತಿ ಪುರಸ್ಕೃತ ರಾದ ಪ್ರೊ.ಬಿ.ವಿ.ರವಿ ಶಂಕರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೆ.ಟಿ. ವಿಶ್ವನಾಥ್ ಶ್ರೀ ಜ್ಞಾನ ಮಂದಾರ ಟ್ರಸ್ಟ್ (ರಿ) ಬೆಂಗಳೂರು ಆಶ್ರಯದಲ್ಲಿ ಈ ಬಾರಿ ಸುಳ್ಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ-2021″ ಸಮಾಜ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಗೌರವಿಸಿರುವುದು ನನಗೆ ಬಹಳಷ್ಟು ಹೆಮ್ಮೆ ತಂದಿದೆ ಎಂದರು.
ದಿವ್ಯ ಸಾಗರ ಶಿಕ್ಷಣ ಫೌಂಡೇಷನ್ ಮತ್ತು ಜ್ಞಾನ ಮಂದಿರ ಶಿಕ್ಷಣ ಸಂಸ್ಥೆ ದಾನಿಗಳು ಮುಂಬಯಿ ಇದರ ಅಧ್ಯಕ್ಷರಾದ ಸಮಾಜ ರತ್ನ ದಿವಾಕರ್ ಎನ್. ಶೆಟ್ಟಿ, ಜ್ಞಾನ ಮಂದಿರ ಅಕಾಡೆಮಿ ಬೆಂಗಳೂರು ಇದರ ಮಹಾಪೋಷಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಎಸ್.ಎಡಪಡಿತ್ತಾಯ,ಸುಳ್ಯದಅಕಾಡೆಮಿ ಆಫ್ ಲಿಬರಲ್ ಶಿಕ್ಷಣ ಟ್ರಸ್ಟ್ ಇದರ ಆಧ್ಯಕ್ಷರಾದ ಡಾ. ಕೆ.ವಿ.ಚಿದಾನಂದ,ಹಿರಿಯ ನ್ಯಾಯವಾದಿಗಳಾದ ಮೋರ್ಲಾ ರತ್ನಾಕರ ಶೆಟ್ಟಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ಬೆಂಗಳೂರು ಇದರ ಸಲಹೆಗಾರರಾದ ಕೆ.ಎಸ್.ಗುರುಪ್ರಸಾದ್ ಉಪಸ್ಥಿತರಿದ್ದರು.ಜ್ಞಾನ ಮಂದಾರ ಅರಳು ಮಲ್ಲಿಗೆ ವಿದ್ಯಾರ್ಥಿನಿಯರಿಂದ ನೃತ್ಯ ರೂಪಕ ಹಾಗೂ ಭಾವ ಗೀತೆ ಗಾಯನ ನಡೆಯಿತು.