Header Ads
Header Ads
Breaking News

ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರ್‍ಯತಂತ್ರ: ಮಾ.18ರವರೆಗೆ ಕಾಂಗ್ರೆಸ್ ಸರಕಾರದ ಸಾಧನಾ ಯಾತ್ರೆ

ಸುಳ್ಯ: ಸುಳ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದ್ದು ಸರಕಾರದ ಸಾಧನಾ ಯಾತ್ರೆ ಮತ್ತು ಗ್ರಾಮ ಸಮಾವೇಶಗಳ ಮೂಲಕ ಜನರ ಬಳಿಗೆ ತೆರಳುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ ಅವರು “ಕಾಂಗ್ರೆಸ್ ಪ್ರತೀ ಗ್ರಾಮಗಳಲ್ಲಿ ಗ್ರಾಮ ಸಮಾವೇಶ ನಡೆಸುತ್ತದೆ. ಯಾವುದಾದರೊಂದು ಮನೆಯ ಆತ್ಮೀಯ ವಾತಾವರಣದಲ್ಲಿ ಇದನ್ನು ನಡೆಸಲಾಗುವುದು. ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸರಕಾರದ ಸಾಧನಾ ಯಾತ್ರೆ ಮಾ.10ರಿಂದ 18ರ ತನಕ ನಡೆಯಲಿದ್ದು ಪ್ರತೀ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಎರಡು ದಿನ ಈ ಯಾತ್ರೆ ನಡೆಯಲಿದೆ. ರಾಜ್ಯ ಸರಕಾರದ ಸಾಧನೆಗಳನ್ನು ಇದರಲ್ಲಿ ಭಿತ್ತರಿಸಲಾಗುವುದು ಎಂದು ಹೇಳಿದರು.
ಮಾ.21ರಂದು ರಾಹುಲ್ ಗಾಂಧಿಯವರು ಮಂಗಳೂರಿಗೆ ಆಗಮಿಸಲಿದ್ದು ಸುಳ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಹೇಳಿದರು. ಈ ಬಾರಿ ಬದಲಾವಣೆ ಕೊಡಿ ಎಂದು ನಾವು ಮತದಾರರಲ್ಲಿ ಕೇಳುತ್ತಿವೆ. ಹೇಗೂ ಗೆಲ್ಲಬಹುದೆಂಬ ಭಾವನೆ ಬಂದು ಬಿಟ್ಟರೆ ಕ್ಷೇತ್ರದಲ್ಲಿ ಯಾವ ಕೆಲಸಗಳೂ ನಡೆಯುವುದಿಲ್ಲ. ಇದುವರೆಗೆ ಸುಳ್ಯದಲ್ಲಿ ಹಾಗಾಗಿದೆ. ಆದುದರಿಂದ ಈ ಬಾರಿ ಬದಲಾವಣೆ ತರಲು ಜನ ನಿರ್ಧರಿಸಿದ್ದಾರೆ ಹೇಳಿದರು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಾಮತ್, ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಂ ಬೆಟ್ಟ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ವೇದನಾಥ್ ಸುವರ್ಣ, ನಂದಕುಮಾರ್ ಮಡಿಕೇರಿ, ಕೆ.ಎಂ.ಮುಸ್ತಫ, ಅಶೋಕ್ ನೆಕ್ರಾಜೆ, ಶ್ರೀಹರಿ ಕುಕ್ಕುಡೇಲು, ಗೀತಾ ಕೋಲ್ಚಾರ್ ಮೊದಲಾದವರು ಹಾಜರಿದ್ದರು.
ವರದಿ: ಪದ್ಮನಾಭ ಸುಳ್ಯ