Header Ads
Header Ads
Breaking News

ಸುಳ್ಯದಲ್ಲಿ ಕಾಂಞಂಗಾಡ್-ಕಾಣಿಯೂರು ರೈಲ್ವೆ ಕ್ರಿಯಾ ಸಮಿತಿ ಸಭೆ

ಸುಳ್ಯದ ಮೂಲಕ ಹಾದು ಹೋಗುವ ಕಾಂಞಂಗಾಡ್-ಕಾಣಿಯೂರು ರೈಲ್ವೇ ಮಾರ್ಗ ಆರಂಭಿಸುವ ಕೆಲಸಕ್ಕೆ ಕರ್ನಾಟಕ ಸರಕಾರವನ್ನು ಒಪ್ಪಿಸುವ ಕೆಲಸ ಆಗಬೇಕಾಗಿದ್ದು. ಇದಕ್ಕಾಗಿ15 ದಿನಗಳ ಒಳಗೆ ರಾಜ್ಯದ ಮುಖ್ಯಮಂತ್ರಿಯನ್ನು ತಾಲೂಕಿನ ಸರ್ವಪಕ್ಷ ಮುಖಂಡರ ನಿಯೋಗದೊಂದಿಗೆ ತೆರಳಿ ಭೇಟಿ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.ಸುಳ್ಯದ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಂಞಂಗಾಡ್-ಕಾಣಿಯೂರು ರೈಲ್ವೆ ಕ್ರಿಯಾ ಸಮಿತಿಯ ಪಿ.ಬಿ.ಸುಧಾಕರ್ ರೈ ಸುಳ್ಯದ ಭಾಗದಲ್ಲಿ ರೈಲ್ವೆ ಮಾರ್ಗ ಹಾದುಹೋಗಬೇಕು ಎನ್ನುವುದು ನಮ್ಮೆಲ್ಲರ ಆಸೆ. ಸುಳ್ಯದ ವಾಣಿಜ್ಯ ಬೆಳೆಗಳ ಸಾಗಾಟ ಮತ್ತು ವ್ಯಾಪರೋದ್ಯಮದ ಬೆಳವಣಿಗೆಗೆ ರೈಲು ಮಾರ್ಗ ಅನಿವಾರ್ಯ, ಇದಕ್ಕಾಗಿ ಹಲವು ಸಭೆಗಳು ನಡೆದಿದೆ. ಸಮಿತಿಗಳು ರಚನೆ ಆಗಿದೆ. ಸರಕಾರಗಳಿಗೆ ಮನವಿಗಳನ್ನು ಸಲ್ಲಿಸಿಯಾಗಿದೆ.

ಆದರೆ ಇದುವರೆಗೂ ಅಂತಿಮಗೊಂಡಿಲ್ಲ. ಕಾಂಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗ ಕೇರಳ ಮತ್ತು ಕರ್ನಾಟಕದ ಭಾಗವಾಗಿದೆ. ಕೇರಳ ಸರಕಾರವನ್ನು ಮನವೋಲಿಸಿ ಒಪ್ಪಿಗೆ ಕೊಡಿಸುವ ಕೆಲಸವನ್ನು ಅಲ್ಲಿಯವರು ಈಗಾಗಲೇ ಮಾಡಿದ್ದಾರೆ. ಇನ್ನು ನಮ್ಮ ಸರಕಾರವನ್ನು ಒಪ್ಪಿಸುವ ಕೆಲಸ ಆಗಬೇಕಾಗಿದೆ ಎಂದರು.ಕೇರಳದ ರೈಲ್ವೆ ಕ್ರಿಯಾ ಸಮಿತಿಯ ಸಂಚಾಲಕ ಸೂರ್ಯನಾರಾಯಣ ಭಟ್ ಮಾತನಾಡಿ ಕಾಂಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗದ ಕೆಲಸ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆಗಬೇಕಿದೆ.

ಇದಕ್ಕೆ ಆಗುವ ಅರ್ಧ ವೆಚ್ಚವನ್ನು ಕೇಂದ್ರ ಸರಕಾರ ಭರಿಸಿದರೆ ಉಳಿದ ಅರ್ಧ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕಾಗುತ್ತದೆ. ಈಗಾಗಲೇ ಕೇರಳ ಸರಕಾರ ಒಪ್ಪಿಗೆ ನೀಡಿದ್ದು ಮೊದಲ ಹಂತವಾಗಿ ೩೨೫ ಕೋಟಿ ರೂ ಬಿಡುಗಡೆ ಮಾಡಿದೆ. ಇನ್ನು ಕರ್ನಾಟಕ ಸರಕಾರದ ತಾಂತ್ರಿಕ ಒಪ್ಪಿಗೆ ದೊರೆಯಬೇಕು ಎಂದು ಹೇಳಿದರು.ಸಭೆಯಲ್ಲಿ ಕಾಂಞಂಗಾಡ್-ಕಾಣಿಯೂರು ರೈಲ್ವೆ ಕ್ರಿಯಾ ಸಮಿತಿಯ ಪ್ರಮುಖರಾದ ಯೂಸೂಫ್ ಹಾಜಿ,  ಸದಸ್ಯರಾದ ಕುಂಞಿಕಣ್ಣನ್ ಕಕ್ಕಾನ, ರತ್ನಾಕರ್, ಸುಳ್ಯ ಸಮಿತಿಯ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಉಪಸ್ಥಿತರಿದ್ದರು.

Related posts

Leave a Reply