Header Ads
Header Ads
Breaking News

ಸುಳ್ಯದಲ್ಲಿ ಕೊರಗ ಜನಾಂಗದ ಕುಂದುಕೊರತೆ ಸಭೆ

ಕೊರಗ ಜನಾಂಗಕ್ಕೆ ಸರಕಾರದ ಅನೇಕ ಯೋಜನೆಗಳು ಕಾರ್ಯಗತದಲ್ಲಿದೆ. ಈ ಯೋಜನೆಗಳನ್ನು ದಲ್ಲಾಳಿಗಳ ಮೊರೆ ಹೋಗದೇ ಸರಿಯಾದ ರೀತಿಯಲ್ಲಿ ಸದುಪಯೋಗಿಸಿಕೊಳ್ಳಬೇಕು. ಅನ್ಯರ ಪಾಲಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಸರಕಾರದ ಅಧೀನ ಇಲಾಖೆಗಳನ್ನು ಸದಾ ಸಂಪರ್ಕದಲ್ಲಿರಬೇಕು ಎಂದು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ ಹೇಳಿದರು.ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೊರಗ ಜನಾಂಗದ ಕುಂದುಕೊರತೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸೂಚನೆ ನೀಡಿದರು. ಕೊರಗ ಜನಾಂಗದವರು ಗುಡ್ಡಪ್ರದೇಶದಲ್ಲಿ ವಾಸಿಸುತ್ತಿದ್ದು, ರೇಷನ್‌ಕಾರ್ಡ್, ವಿದ್ಯುತ್ ವ್ಯವಸ್ಥೆ ಯಿಂದ ವಂಚಿತರಾಗಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗಗಾಲೇ ಜನಾಂಗದ ಅನೇಕರು ವಿದ್ಯಾವಂತರಾಗಿದ್ದು, ತಮ್ಮ ಸಮಸ್ಯೆಗಳಿಗೆ ಮಧ್ಯವರ್ತಿಗಳ ಮಧ್ಯೆ ಸಿಲುಕದೇ ನೇರವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸರಕಾರ ಅಧೀನ ಇಲಾಖೆಗಳನ್ನು ಸಂಪರ್ಕಿಸಿ, ಆಹವಾಲು ನೀಡಿ, ಎಂದು ಭವಾನಿಶಂಕರ್ ಹೇಳಿದರು.

ನಗರ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ, ಸೋಣಂಗೇರಿಯಲ್ಲಿ ಎರಡು ಕುಟುಂಬಗಳಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮೀ, ಕಂದಾಯ ಇಲಾಖೆಯ ವಿನೋದ್ ಇದ್ದರು. ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಶಿಕ್ಷಣ ಇಲಾಖೆಯ ವಸಂತ ಏನೆಕಲ್ಲು, ಸಂಚಾರಿ ವೈದ್ಯಾಧಿಕಾರಿ ಡಾ.ನಂದಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *