Header Ads
Header Ads
Breaking News

ಸುಳ್ಯದಲ್ಲಿ ಕೊಲೆಯಾದ ಅಕ್ಷತಾ ಮೃತ ಕುಟುಂಬಕ್ಕೆ ತಕ್ಷಣ ಪರಿಹಾರ ಪುತ್ತೂರಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಹೇಳಿಕೆ

ಪುತ್ತೂರು: ಸುಳ್ಯದಲ್ಲಿ ಹಾಡುಹಗಲೇ ಜನನೀಬಿಡ ಪ್ರದೇಶದಲ್ಲಿ ಒಬ್ಬ ಹೆಣ್ಣು ಮಗಳ ಕೊಲೆಯಾಗಿದ್ದು, ಆ ಹೆಣ್ಣುಮಗಳ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ಸ್ಥೈರ್ಯ ನಿಧಿ ಯೋಜನಡಿಯಲ್ಲಿ ರೂ. 25ಸಾವಿರ ಚೆಕ್ ನೀಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಪುತ್ತೂರಿನಲ್ಲಿ ತಿಳಿಸಿದ್ದಾರೆ.ಅವರು ಮೃತಪಟ್ಟ ಅಕ್ಷತಾಳ ಮುಳ್ಳೇರಿಯ ಸಮೀಪದ ಕಾರಡ್ಕ ಗ್ರಾಮದ ಕರಣಿಯಲ್ಲಿರುವ ಮನೆಗೆ ತೆರಳಿ ಆಕೆಯ ತಂದೆ ತಾಯಿ ಮತ್ತು ಸಹೋದರಿಗೆ ಸಾಂತ್ವಾನ ಹೇಳಿದ ಬಳಿಕ ಪುತ್ತೂರಿಗೆ ಆಗಮಿಸಿ ನಿರೀಕ್ಷಿಣಾ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಆಕೆಯ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ರೂ. 25ಸಾವಿರ ಚೆಕ್‌ನ್ನು ನಾಳೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕರಿಗೆ ತಿಳಿಸಿದ್ದೇನೆ. ಉಳಿದಂತೆ ಜಿಲ್ಲಾಧಿಕಾರಿಯವರಲ್ಲಿ, ಎಸ್ಪಿಯವರಲ್ಲಿ ಸಂಬಂಧಪಟ್ಟ ಮಂತ್ರಿಯವರಲ್ಲಿ ಮಾತನಾಡಿ ಆಕೆಯ ಕುಟುಂಬದ ಸದಸ್ಯರೋರ್ವರಿಗೆ ಉದ್ಯೋಗ ಕೊಡಿಸುವಂತೆ ಚಿಂತನೆ ನಡೆಸಲಾಗುವುದು. ಜೊತೆಗೆ ಕೃತ್ಯ ನಡೆಸಿದ ಆರೋಪಿಗೆ ಸೂಕ್ತ ಶಿಕ್ಷೆ ಸಿಗುವಂತೆ ಎಸ್ಪಿಯವರಲ್ಲೂ ಮಾತನಾಡಿದ್ದೇನೆ ಎಂದರು.
ವರದಿ: ಅನೀಶ್ ಪುತ್ತೂರು

Related posts

Leave a Reply