Header Ads
Header Ads
Breaking News

ಸುಳ್ಯದಲ್ಲಿ ತಾಲೂಕಿನಾದ್ಯಂತ ಸಂಚಾರಿಸಿದ ಸಾಧನಾ ಯಾತ್ರೆ ಸಮಾರೋಪ ಅಭಿವೃದ್ದಿಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಕೆ.ಪಿ.ಸಿ.ಸಿ ಕಾರ್ಯದರ್ಶಿ ಟಿ.ಎಂ.ಶಹೀದ್ ಹೇಳಿಕೆ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಅಭೂತಪೂರ್ವ ಅಭಿವೃದ್ದಿ ಆಗಿದೆ. ಚುನಾವಣೆ ಪ್ರಣಾಳಿಕೆ ನೀಡಿದ ಶೇ. 95% ಆಶ್ವಾಸನೆಗಳನ್ನು ಈಡೇರಿಸಿದ್ದಾರೆ. ದೇಶದಲ್ಲಿಯೇ ಕರ್ನಾಟಕ ಅಭಿವೃದ್ದಿಯಲ್ಲಿ ಉತ್ತುಂಗದಲ್ಲಿದೆ. ಇದೇ ಅಭಿವೃದ್ದಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಹೀದ್ ಹೇಳಿದರು.

ಸುಳ್ಯ ತಾಲೂಕಿನಾದ್ಯಂತ 9 ದಿನಗಳಿಂದ ನಡೆದ ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆಗಳ ಸಾಧನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದ ಬಳಿಕ ಹಲವು ಜನಪರ ಯೋಜನೆಗಳನ್ನು ಜನರಿಗೆ ನೀಡಿದ್ದಾರೆ. ಸರ್ವಧರ್ಮದವರಿಗೆ ಆದ್ಯತೆ ನೀಡಿದ್ದಾರೆ. ಎಲ್ಲಾ ಧರ್ಮದ ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುವ ಮೂಲಕ ಐಕ್ಯತೆಯನ್ನು ಸಾರಿದ್ದಾರೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿ ಸುಳ್ಯದಲ್ಲಿ 25ವರ್ಷದಲ್ಲಿ ಬಿಜೆಪಿಯವರು ಮಾಡಿದ್ದ ಸಾಧನೆ ಕೇವಲ ಶೂನ್ಯ. ಆದರೆ ಸುಳ್ಯದಲ್ಲಿ ಕಾಂಗ್ರೆಸ್‌ನ ಶಾಸಕರು ಇಲ್ಲದಿದ್ದರೂ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಡಾ|ರಘು ಅವರು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ಬಿಜೆಪಿಯವರು ಮಾಡಿದ ಸಾಧನೆಗಿಂತ ಜಾಸ್ತಿ ಸಾಧನೆ ಮಾಡಿದ್ದಾರೆ. ಬಿಜೆಪಿಯವರು ಧರ್ಮ-ಧರ್ಮಗಳಲ್ಲಿ ಯುದ್ಧಮಾಡಿಸಿ ಲಾಭಪಡೆಯುವಲ್ಲಿ ತೊಡಗುತ್ತಾರೆ ಎಂದು ಹೇಳಿದರು.ಸುಳ್ಯದ ಸಂಭಾವ್ಯ ಅಭ್ಯರ್ಥಿ ಡಾ|ರಘು, ಪ್ರಚಾರ ಸಮಿತಿಯ ತಾಲೂಕು ಅಧ್ಯಕ್ಷ ಬೆಟ್ಟರಾಜಾರಾಂ ಭಟ್, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಾಮತ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾಕೋಲ್ಚಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಗೋಕುಲ್‌ದಾಸ್, ಧರ್ಮಪಾಲ ಕೊಂಗಾಜೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ