Header Ads
Breaking News

ಸುಳ್ಯದಲ್ಲಿ ದಲಿತ ನೇಕಾರರ ಅಭಿವೃದ್ಧಿ ಸಹಕಾರ ಸಂಘ ಅಸ್ತಿತ್ವಕ್ಕೆ

ಸುಳ್ಯ: ಗ್ರಾಮೀಣ ಪ್ರದೇಶದ ಜನರಿಗೆ ಜಾತಿ ಆಧಾರಿತ ಕಸುಬುಗಳಿಗೆ ಪರ್‍ಯಾಯವಾಗಿ ಅಭಿವೃದ್ದಿ ಆಧಾರಿತ ಹೊಸ ವೃತ್ತಿಗಳ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಸೃಷ್ಟಿಸಿಕೊಡಲು ಸಹಕಾರಿಯಾಗಲು ದಲಿತ ನೇಕಾರರ ಅಭಿವೃದ್ದಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಅಚ್ಚುತ್ತಾ ಮೆಲ್ಕಜೆ ಹೇಳಿದರು.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಯುವ ಜನರಿಗೆ ಹೊಸ ವೃತ್ತಿಗಳನ್ನು ತೊಡಗಿಸಿಕೊಳ್ಳಲು ಮತ್ತು ವೃತ್ತಿಗಳನ್ನು ಪರಿಚಯಿಸುವ ಸಕರಾತ್ಮಕ ಧ್ಯೇಯೋದ್ದೇಶಗಳನ್ನು ಹೊಂದಿರುವ ದಲಿತ ನೇಕಾರರ ಅಭಿವೃದ್ದಿ ಸಹಕಾರಿ ಸಂಘವನ್ನು ಅಂಬೇಡ್ಕರ್ ಜಯಂತಿ ದಿನಾಚರಣೆಯ ಸಂದರ್ಭ ರೂಪಿಸಲಾಗಿದೆ. ಗ್ರಾಮೀಣ ಪ್ರದೇಶದ ಯುವ ಜನರಿಗೆ ನೇಕಾರಿಕೆಯಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಸೃಷ್ಟಿಸಿಕೊಡುವುದು, ಟೈಲರಿಂಗ್ ಮತ್ತು ಸಿದ್ದ ಉಡುಪು ತಯಾರಿಕೆಗೆ ತರಬೇತಿ ನೀಡುವುದು. ಉದ್ಯೋಗ ಸಂಬಂಧಿತ ಕ್ಷೇತ್ರಗಳ ವೀಕ್ಷಣೆ, ಅಧ್ಯಯನ ಪ್ರವಾಸ ಏರ್ಪಡಿಸುವುದು. ಸಂಘದ ಸದಸ್ಯರ ಮಕ್ಕಳಿಗೆ ವಿಧ್ಯಾರ್ಥಿ ವೇತನ, ಶಿಚ್ಯ ವೇತನ, ಕೌಶಲ್ಯ ತರಬೇತಿ ಕಾರ್ಯಗಾರಗಳು, ಆರೋಗ್ಯ ವಿಮೆಗಳಂತಹ ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ಸಂಘವು ಮುನ್ನಡೆಸುವ ಉದ್ದೇಶ ಹೊಂದಿದೆ. ಈ ಮೂಲಕ ಕೆಳ ಸ್ತರ ಜನ ಸಮುದಾಯದ ಸಬಲೀಕರಣಕ್ಕೆ ಒತ್ತು ನೀಡಲಾಗುವುದು ಎಂದ ಅವರು ಸಂಘದ ಉದ್ಘಾಟನೆ ಸದ್ಯದಲ್ಲೇ ನಡೆಯಲಿದ್ದು, ಈ ಸಮಾರಂಭದಲ್ಲಿ ಸಮಾಜದ 5 ಮಂದಿ ಸಾಧಕರನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಎ.ಕೆ.ಹಿಮಕರ, ಪುತ್ರ ಮೊಗ್ರ, ದೇವಪ್ಪ ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply

Your email address will not be published. Required fields are marked *