Header Ads
Breaking News

ಸುಳ್ಯದಲ್ಲಿ ನಡೆದ ಸಂಪತ್ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ

ಸುಳ್ಯ: ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಆರೋಪಿ ಸಂಪತ್‍ಕುಮಾರ್‍ನನ್ನು ಕೋವಿಯಿಂದ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪ್ರಮುಖ ಆರೋಪಿಗಳನ್ನು ಸುಳ್ಯ ಸರ್ಕಲ್ ಇನ್ಸ್‍ಪೆಕ್ಟರ್ ನೇತೃತ್ವದ ಹಾಗೂ ಮಂಗಳೂರು ಡಿಸಿಐಬಿ ಪೆÇಲೀಸರ ತನಿಖಾ ತಂಡ ಬಂಧಿಸಿದ್ದಾರೆ. ಪೊಲೀಸ್ ತನಿಖೆ ವೇಳೆ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಮಾಡಿದ್ದ ದ್ವೇಷದ ಹಿನ್ನಲೆಯಲ್ಲಿ ಆರೋಪಿಯಾಗಿದ್ದ ಸಂಪತ್ ಕುಮಾರ್‍ನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ.

ಸಂಪಾಜೆ ಕಳಮೆ ಮನೆಯ ಮನು(35), ಕಲ್ಲುಗುಂಡಿಯ ಕೂಲಿಶೇಡ್ ನಿವಾಸಿ ಬಿಪಿನ್(27), ಕಲ್ಲುಗುಂಡಿಯ ದಂಡಕಜೆ ಮನೋಜ್(35), ಕಲ್ಲುಗುಂಡಿ ದಂಡಕಜೆಯ ಕಾರ್ತಿಕ್, ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕಮನೆ ಶಿಶಿರ್(32) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.ಅ.8 ರಂದು ಶಾಂತಿನಗರದಲ್ಲಿ ಕೊಲೆ ಆರೋಪಿ ಸಂಪತ್ ಕುಮಾರ್(35) ರನ್ನು ಮೇಲಿನ ಐವರು ಆರೋಪಿಗಳು ಕೋವಿಯಿಂದ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲು ಬಳಸಿದ್ದ ಕ್ವಾಲೀಸ್ ವಾಹನ ಮತ್ತು ಸುಬ್ರಹ್ಮಣ್ಯ ಬಿಸ್ಲೆ ಘಾಟ್‍ನಲ್ಲಿ ಸ್ವಿಫ್ಟ್ ಕಾರಿನ ಮೂಲಕ ತಲೆಮರೆಸಿಕೊಳ್ಳಲು ಬಳಸಿದ್ದ ಕಾರನ್ನು ವಶಪಡಿಕೊಳ್ಳಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೂರು ಬಂದೂಕು, ಕತ್ತಿ, ಒಂದು ಚೂರಿಯನ್ನು ವಶಪಡಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *