Header Ads
Header Ads
Breaking News

ಸುಳ್ಯದಲ್ಲಿ ಪತ್ರಿಕಾರಂಗ ಪರಿಚಯ ಸರಣಿ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಸಾಮಾಜಿಕ ಜಾಲತಾಣಗಳ ಪ್ರಭಾವಗಳಿಂದ ಜನರಿಗೆ ಸುಳ್ಳು ಸುದ್ದಿಯ ಬಿತ್ತರವಾಗುತ್ತಿದೆ. ಇದರಿಂದ ಸಮಾಜದಲ್ಲಿ ಸ್ವಸ್ಥ್ಯ, ಕದಡುತ್ತಿದೆ. ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಸ್ವಚ್ಚ ಮನಸ್ಸಿನ ಪತ್ರಕರ್ತರ ಅಗತ್ಯ ಸಮಾಜಕ್ಕೆ ಇದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ರಾಂ ಹೇಳಿದರು.ಅವರು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಪತ್ರಿಕಾ ರಂಗ ಪರಿಚಯ ಸರಣಿ ತರಬೇತಿಯ ಉದ್ಘಾಟನೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿ ಪತ್ರಕರ್ತ ತನ್ನ ಕ್ರೀಯಾಶೀಲತೆಯ ಮೂಲಕ ಅವಕಾಶಗಳನ್ನು ಮತ್ತು ಸುದ್ದಿಗಳನ್ನು ಹುಡುಕಿಕೊಂಡು ಹೋಗಬೇಕು. ಸಮಾಜದಲ್ಲಿ ಸಾಮಜಿಕ ಸ್ಪಂದನೆಯನ್ನು ಪತ್ರಕರ್ತ ರೂಢಿಸಿಕೊಳ್ಳಬೇಕು. ಭಾಷಾ ನೈಪುಣ್ಯತೆ, ಸಾಮಾನ್ಯ ಜ್ಞಾನಗಳ ಮೂಲಕ ಪತ್ರಕರ್ತ ಬೆಳೆಯಬೇಕೇ ಹೊರತು ಭ್ರಮೆಗಳಿಂದ ಅಲ್ಲ ಎಂದು ಹೇಳಿದರು.ಸಮಾರಂಭದ ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ ಪತ್ರಿಕೋದ್ಯಮ ಕ್ಷೇತ್ರ ಜನರಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಜನರಿಗೆ ಸುಳ್ಳು ಸುದ್ದಿಗಳು ಹೋಗುತ್ತಿದೆ. ಇದರಿಂದ ಜನರಲ್ಲಿ ಗೊಂದಲ ಮೂಡಿ ಪತ್ರಿಕೆಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಸುದ್ದಿಯ ಬಗ್ಗೆ ಕುತೂಹಲ ಬೆಳೆಸಿಕೊಳ್ಳದ ಪತ್ರಕರ್ತರ ಒಳ್ಳೆಯ ವರದಿಗಾರ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.ಸರಣಿ ತರಬೇತಿ ಕಾರ್ಯಕ್ರಮವನ್ನು ಸುದ್ದಿ ಬಿಡುಗಡೆ ಸಂಪಾದಕ ಡಾ| ಯು.ಪಿ.ಶಿವಾನಂದ ಉದ್ಘಾಟಿಸಿರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ ಚಿದಾನಂದ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕೆವಿಜಿ ಕಾನೂನು ಕಾಲೇಜು ಪ್ರಭಾರ ಪ್ರಾಂಶುಪಾಲ ಜಯರಾಮ ವೈ ಉಪಸ್ಥಿತರಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಜೇಶ್ವರ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್ ಪಡೆದ ಅಭಿಜ್ಞಾ ರಾವ್ ಸುಬ್ರಹ್ಮಣ್ಯ, ರಾಜ್ಯ ಹಿಂದುಳಿದ ವರ್ಗಗಳ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪಡೆದ ಹರೀಶ್ ಬಂಟ್ವಾಳ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾದ ಹರೀಶ್ ಮೋಟುಕಾನ, ಭಾಸ್ಕರ ರೈ ಕಟ್ಟಬೀಡು, ರವಿಚಂದ್ರ ಭಟ್, ಗಂಗಾಧರ್ ಕಲ್ಲಪಳ್ಳಿ, ಲೋಕೇಶ್ ಪೆರ್ಲಂಪಾಡಿ ಅವರನ್ನು ಗೌರವಿಸಲಾಯಿತು.

Related posts

Leave a Reply