Header Ads
Header Ads
Breaking News

ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ ಉಪನ್ಯಾಸ ಕಾರ್ಯಕ್ರಮ

ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ಅತೀ ವೇಗದಿಂದ ಮುನ್ನಡೆಯುತ್ತಿದೆ. ಇದರ ಜತೆಗೆ ಪತ್ರಕರ್ತರು ಅಷ್ಟೇ ವೇಗವಾಗಿ ದುಡಿಯುವ ಅನಿವಾರ್‍ಯತೆ ಇದೆ. ಇವುಗಳ ಹಿಂದೆ ಬಡತನವೂ ಕಾಡುತ್ತದೆ. ಇಂತಹ ಸನ್ನಿವೇಶದಲ್ಲೂ ಪತ್ರಕರ್ತರು ದೃತಿಗೆಡದೆ ತಮ್ಮ ಸೇವಾಮನೋಭಾವನೆ ಯೊಂದಿಗೆ ಸಾಮಾಜಿಕ ಕಳಕಳಿಯ ಬಗ್ಗೆ ವರದಿಗಳನ್ನು ಪ್ರಕಟಿಸುವ ಮೂಲಕ ಅತೀ ಹೆಚ್ಚು ಸಕ್ರೀಯಗೊಳ್ಳುವ ಅಗತ್ಯ ಇದೆ ಎಂದು ಮಂಗಳೂರು ಪ್ರಜಾವಾಣಿಯ ಹಿರಿಯ ವರದಿಗಾರ್ತಿ ಕೋಡಿಬೆಟ್ಟು ರಾಜಲಕ್ಷ್ಮೀ ಹೇಳಿದರು.

ಅವರು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ಲಯನ್ಸ್ ಸದನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಪತ್ರಿಕೋದ್ಯಮ ಸೇವಾ ಕ್ಷೇತ್ರವಾಗಿ ಬೆಳೆದಿದೆ. ಪತ್ರಕರ್ತರು ಬದ್ದತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಪತ್ರಕರ್ತರು ಯಾವತ್ತು ತಮ್ಮ ವರದಿಯಲ್ಲಿ ಒಂದು ಜಾತಿ, ಧರ್ಮ, ಪಕ್ಷ, ಸಂಘಟನೆಗಳಿಗೆ ಸೀಮಿತ ಮಾಡದೇ ಸಮಾನ ರೀತಿಯಲ್ಲಿ ವರದಿಗಳನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಇಂದಾಜೆ ಮಾತನಾಡಿ ದೇಶ ಸ್ಪರ್ಧಾತ್ಮಕ ಯುಗದಲ್ಲಿದೆ. ಅದೇ ವೇಗದಲ್ಲಿ ಪತ್ರಕರ್ತರು ಬೆಳೆಯಬೇಕು. ಈ ಬಿಡುವಿಲ್ಲದ ಪರಿಸ್ಥಿತಿಯಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಗ್ರಾಮೀಣ ಪ್ರದೇಶದ ಹಲವು ಪತ್ರಕರ್ತರು ವಿವಿಧ ಸಮಸ್ಯೆಯಿಂದ ದುಡಿಯುತ್ತಿದ್ದಾರೆ. ಸಂಕಷ್ಟದಲ್ಲಿರುವ ಪತ್ರಕರ್ತರ ಸಮಸ್ಯೆಗೆ ಸರಕಾರದ ಸ್ಪಂದನೆ ಅಗತ್ಯ ಎಂದು ಹೇಳಿದರು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಹರೀಶ್ ಬಂಟ್ವಾಳ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಬಿಸಿನೆಸ್ ಲೈನ್ ಪತ್ರಿಕೆಯ ಸಹಾಯಕ ಸಂಪಾದಕ ವಿನಾಯಕ ಎ.ಜೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಸಾಮಾಜಿಕ ಮುಖಂಡ ಪಿಜಿಎಸ್‌ಎನ್ ಪ್ರಸಾದ್ ಅವರಿಂದ ಕಳೆದ 40 ವರ್ಷಗಳಿಂದ ಮಳೆ ನೀರು ದಾಖಲಾತಿಯ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಶಿವಪ್ರಸಾದ್ ಕೇರ್ಪಳ, ಕಾರ್ಯದರ್ಶಿ ಭರತ್‌ಕನ್ನಡ್ಕ, ಕೋಶಾಧಿಕಾರಿ ದಯಾನಂದ ಕೊರತ್ತೋಡಿ ಹಾಜರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply