Header Ads
Header Ads
Breaking News

ಸುಳ್ಯದಲ್ಲಿ ಪ್ರಪ್ರಥಮ ತಾಲೂಕು ತುಳು ಸಾಹಿತ್ಯ ಸಮ್ಮೇಳನ

ತುಳು ಭಾಷೆಯ ಅಭಿವೃದ್ದಿಗೆ ಅನುದಾನ ಸವಲತ್ತು ಕೊಡಿ ಎಂದು ಕೇಳುವುದಿಲ್ಲ. ತುಳು ಭಾಷೆಯ ಅಭಿಮಾನಕ್ಕಾಗಿ ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸಿ. ತುಳು ಭಾಷೆಗೆ ಪ್ರಾತಿನಿಧ್ಯ ನೀಡಿ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಸರಕಾರ ಘೋಷಣೆ ಮಾಡಬೇಕು ಎಂದು ಸುಳ್ಯ ತಾಲೂಕು ಪ್ರಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಆಗ್ರಹಿಸಿದ್ದಾರೆ.ಅವರು ರಥಬೀದಿಯ ಡಾ. ಕುರುಂಜಿ ವೆಂಕಟ್ರಮಣ ಗೌಡ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತುಳು ಭಾಷೆ ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಲು ಅರ್ಹ ಭಾಷೆ.

ಆದರೆ ರಾಜಕೀಯ ನಿರಾಶಕ್ತಿಯಿಂದ ಇದು ಸಾಧ್ಯವಾಗುತ್ತಿಲ್ಲ. ರಾಜ್ಯದ ೪೮ ಸಂಸದರು ಸೇರಿ ಒಕ್ಕೊರಲ ತೀರ್ಮಾಣ ಮಾಡಬೇಕು. ತುಳು ಕೇವಲ ಕರಾವಳಿಗೆ ಸೀಮಿತವಲ್ಲ. ವಿಶ್ವವ್ಯಾಪ್ತಿಯಾಗಿದೆ. ತುಳು ಭಾಷೆಯೊಂದಿಗೆ ಕನ್ನಡದ ಮೇಲೆ ಕೂಡ ಅಭಿಮಾನ ಬೆಳೆಸಿ. ಪ್ರತ್ಯೇಕ ರಾಜ್ಯಕ್ಕಾಗಿ ಕರ್ನಾಟಕವನ್ನು ಒಡೆಯುವ ಕೆಲಸ ತುಳುವರು ಮಾಡಬಾರದು ಎಂದರು.ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುಳು ಜನಸಾಮಾನ್ಯರ ಭಾಷೆಯ ಮೂಲಕ ವ್ಯಾವಹಾರಿಕ ಭಾಷೆಯಾಗಿ ಬೆಳವಣಿಗೆ ಆಗುತ್ತಿದೆ. ತುಳು ಭಾಷೆ ಸಾಹಿತ್ಯ ಸೃಷ್ಟಿಗೆ ಇನ್ನಷ್ಟು ಕೆಲಸ ಮಾಡಬೇಕಾಗಿದೆ. ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು.

ನ.ಪಂ.ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ನೆನಪಿನ ಸಂಚಿಕೆ ಬಿಡುಗಡೆ ಮಾಡಿದರು. ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯರಾದ ಎಸ್.ಎನ್.ಮನ್ಮಥ, ಶ್ರೀಮತಿ ಆಶಾ ತಿಮ್ಮಪ್ಪ, ಶ್ರೀಮತಿ ಪುಷ್ಪಾವತಿ ಬಾಳಿಲ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ತುಳು ಸಮ್ಮೇಳನದ ಪೋಷಕಾಧ್ಯಕ್ಷ ಸವಣೂರು ಸೀತಾರಾಮ ರೈ ಉಪಸ್ಥಿತರಿದ್ದರು.ಬೆಳಿಗ್ಗೆ ಸುಳ್ಯದ ಶಾಸ್ತ್ರೀ ವೃತ್ತದಿಂದ ತುಳು ದಿಬ್ಬಣ ಆರಂಭಗೊಂಡು, ಸುಳ್ಯ ನಗರದಲ್ಲಿ ಸಾಗಿ ಚೆನ್ನಕೇಶವ ದೇವಸ್ಥಾನದ ಎದುರಿನ ಶೀಂಟೂರು ನಾರಾಯಣ ರೈ ವೇದಿಕೆ ವರೆಗೆ ಸಾಗಿ ಸಮಾಪನಗೊಂಡಿತು.

Related posts

Leave a Reply