Header Ads
Breaking News

ಸುಳ್ಯದಲ್ಲಿ ಭಾರೀ ಗಾಳಿಮಳೆ:ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ.!

ಸುಳ್ಯ: ನಿನ್ನೆ ಸಂಜೆ ಬೀಸಿದ ಗಾಳಿ-ಮಳೆಗೆ ಸುಳ್ಯ ನಗರ ಸಮೀಪದ ಜಯನಗರ-ಶಾಂತಿನಗರ ಪ್ರದೇಶಗಳಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ. ಕೆಲವು ಮನೆಯ ಶೀಟು, ಹಂಚು ಹಾರಿಹೋದ್ರೆ ಇನ್ನೂ ಕೆಲವು ಮನೆ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟವುಂಟಾಗಿದೆ. ಅಲ್ಲದೆ ಶಾಂತಿ ನಗರ ಹಾಗೂ ಜಯನಗರದಲ್ಲಿ ಅಲ್ಲಲ್ಲಿ ಮರ ಮುರಿದು ಬಿದ್ದಿದೆ. ಸೋಣಂಗೇರಿ ಬಳಿ ಮರಗಳು ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದಿದೆ. ತಾಲೂಕಿನ ಜಾಲ್ಸೂರು, ಕನಕಮಜಲು, ಸುಳ್ಯನಗರದ ಹಲವೆಡೆ ಅಡಿಕೆ ಮರಗಳು ಮುರಿದು ಬಿದ್ದಿವೆ. ಮಳೆ ತಾಲೂಕಿನ ಕೆಲವೆಡೆ ಮಾತ್ರ ಸುರಿದಿದೆ. ಗಾಳಿ-ಮಳೆ ಬಂದ ಪ್ರದೇಶದಲ್ಲಿ ಭಾರೀ ಗಾಳಿಯೂ ಬೀಸಿದ್ದು, ಈ ವೇಳೆ ಒಟ್ಟು36 ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಇದರಿಂದ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಪ್ರದೇಶಗಳಿಗೆ ಸುಳ್ಯ ತಹಸೀಲ್ದಾರ್ ಕುಂಞಿ ಅಹಮ್ಮದ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *