Header Ads
Header Ads
Breaking News

ಸುಳ್ಯದಲ್ಲಿ ಮರಾಟಿ ಸಮಾಜ ಸೇವಾ ಸಂಘದ ಬೆಳ್ಳಿಹಬ್ಬ ಆಚರಣೆ

ಸಮಾಜದಲ್ಲಿರುವ ಜಾತಿ ಸಂಘಟನೆಗಳು ಸಮಾಜಕ್ಕೆ ಹೊರೆಯಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಇಂತಹ ಸಂಘಟನೆಗಳು ಸಮಾಜದ ಅಭಿವೃದ್ದಿಯಲ್ಲಿ ಕೈಜೋಡಿಸುವ ಮೂಲಕ ಸಮಾಜಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಶಾಸಕ ಎಸ್. ಅಂಗಾರ ಹೇಳಿದರು.

ಅವರು ಸುಳ್ಯದ ಮರಾಟಿ ಸಮಾಜ ಸೇವಾ ಸಂಘ ಮತ್ತು ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಆಶ್ರಯದಲ್ಲಿ ಗಿರಿದರ್ಶಿನಿ ಕಲಾ ಮಂದಿರದಲ್ಲಿ ನಡೆದ ಬೆಳ್ಳಿಹಬ್ಬ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಜಾತಿ ಸಂಘಟನೆಗಳು ಕೇವಲ ಜಾತಿಗೆ ಮಾತ್ರ ಸೀಮಿತ ಆಗಬಾರದು. ಜಾತಿ ಸಂಘಟನೆಗಳು ಇಡಿ ಸಮಾಜಕ್ಕೆ ಪೂರಕ ಅಗಿರಬೇಕು. ನಾವು ಕೇವಲ ಜಾತಿಗೆ ಸೀಮಿತ ಆಗದೇ ಸಮಾಜದ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಜಾತಿ ಸಂಘಟನೆಗಳು ಉಳಿಯಬೇಕಾದರೆ ಮೊದಲು ದೇಶ ಉಳಿಯಬೇಕು ಎಂದು ಹೇಳಿದರು.

ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಬೆಳ್ಳಿಹಬ್ಬ ಆಚರಣಾ ಸಮಿತಿ ಅದ್ಯಕ್ಷ ಎ.ಕೆ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರು ಮರಾಟಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮಿತಿ ಚಂದ್ರಮತಿ ಟಿ, ಪುತ್ತೂರು ಮರಾಟಿ ಸೇವಾ ಸಂಘದ ಅಧ್ಯಕ್ಷ ಯು.ಕೆ.ನಾಯ್ಕ್, ಸುಳ್ಯ ನಗರ ಪಂಚಾಯತ್ ಸದಸ್ಯೆ ಮೀನಾಕ್ಷಿ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ. ಸುಂದರ ನಾಯ್ಕ್, ಕೇಂದ್ರ ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕ ಡಾ| ಬಿ.ಜಿ. ನಾಯ್ಕ, ಕಾಸರಗೋಡು ಮರಾಟಿಯೂತ್ ಜನರೇಶನ್ ಕ್ಲಬ್ ಸ್ಥಾಪಕಾಧ್ಯಕ್ಷ ಟಿ. ಸುಬ್ರಾಯ ನಾಯ್ಕ ಜಿಲ್ಲಾ ಮರಾಟಿ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಎಂ. ಈಶ್ವರ ನಾಯ್ಕ ಮುಂಡೋವುಮೂಲೆ, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಜಿ. ದೇವಪ್ಪ ನಾಯ್ಕ, ಸುಳ್ಯ ಮರಾಟಿ ಸೇವಾ ಸಮಾಜದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, , ಬೆಳ್ಳಿಹಬ್ಬ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ದಾಮೋದರ ಮಂಚಿ, ಸುಳ್ಯ ಮರಾಟಿ ಮಹಿಳಾ ವೇದಿಕೆಯ ಉಪಧ್ಯಕ್ಷೆ ಕುಸುಮಾ ಜನಾರ್ಧನ, ಮರಾಟಿ ಯುವ ವೇದಿಕೆಯ ಅಧ್ಯಕ್ಷ ಭವಾನಿ ಶಂಕರ್ ಕಲ್ಮಡ್ಕ, ಬಾಲಕೃಷ್ಣ ಚಾಕೋಟಡ್ಕ, ಕೃಷ್ಣಪ್ಪ ನಾಯ್ಕ ಪೆರುವಾಜೆ, ಉಬರಡ್ಕ ನಾರಾಯಣ ನಾಯ್ಕ ಉಪಸ್ಥಿತರಿದ್ದರು.