Header Ads
Header Ads
Breaking News

ಸುಳ್ಯದಲ್ಲಿ ಮೀಸಲಾತಿ ಮುಕ್ತ ಸುಳ್ಯಕ್ಕಾಗಿ ಸಮಾಲೋಚನಾ ಸಭೆ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ, ಜನಜಾಗೃತಿ ಮತ್ತು ಕಾನೂನು ಹೋರಾಟಕ್ಕೆ ಸಭೆಯಲ್ಲಿ ನಿರ್ಧಾರ

ಸುಮಾರು 7 ದಶಕಗಳಿಂದ ಸುಳ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾದ ಮೀಸಲಾತಿ ಕ್ಷೇತ್ರವಾಗಿ ಉಳಿದುಕೊಂಡಿದೆ. ಇದರ ವಿರುದ್ಧ ಮೀಸಲಾತಿ ಮುಕ್ತ ತಾಲೂಕಿಗಾಗಿ ರೂಪುರೇಷೆ ರಚಿಸಲು ಪಕ್ಷಾತೀತವಾಗಿ ಸಮಾನ ಮನಸ್ಕರನ್ನೊಳಗೊಂಡ ಸಮಾಲೋಚನಾ ಸಭೆ ಸುಳ್ಯದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಸಭೆಯಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ, ಜನರಿಗೆ ಜಾಗೃತಿ ಮೂಡಿಸುವ ಮೂಲಕ ಸಹಿ ಸಂಗ್ರಹ ಮತ್ತು ಕಾನೂನು ಹೋರಾಟ ನಡೆಸಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಮಲೆನಾಡು ಜಂಟಿ ಹೋರಾಟ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಕೆ.ಎಲ್, ಮೀಸಲಾತಿಯಿಂದಾಗಿ ಹಿಂದುಳಿದ ವರ್ಗ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ.

ನಿರಂತರ ಒಂದೇ ಪ್ರದೇಶಕ್ಕೆ ಮೀಸಲಾತಿಯಿರಿಸಿರುವುದು ಸಂವಿಧಾನದ ಪ್ರಜಾಸತ್ತಾತ್ಮಕ ಕಾಯಿದೆಗೆ ವಿರುದ್ಧವಾದುದು. ಆದುದರಿಂದ ಚುನಾವಣಾ ಆಯೋಗ ಮುಂದಿನ ವಿಧಾನಸಭೆ ಚುನಾವಣೆ ಘೋಷಣೆಗೆ ಮೊದಲು 10 ಬಿ. ಡೆಲಿಮಿಟೇಷನ್ ಕಾಯ್ದೆ 2002 ರ ಪ್ರಕಾರ ಚುನಾವಣಾ ಆಯೋಗದ ಅಧ್ಯಕ್ಷರು ಬದಲಾವಣೆ ಮೀಸಲಾತಿ ಬದಲಾಯಿಸುವ ಹಕ್ಕು ಚಲಾಯಿಸಬೇಕೆಂದರು

ಈ ಸಂದರ್ಭ ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ , ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ , ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಅರೆಭಾಷೆ ಅಕಾಡೆಮಿ ಸದಸ್ಯ ಮಾಧವ ಗೌಡ ಕಾಮಧೇನು, ಕೆ.ಸಿ. ಹರೀಶ್ ಕುಮಾರ್ ಪೆರಾಜೆ ಮೊದಲಾದವರು ಉಪಸ್ಥತಿರಿದ್ದರು.