Header Ads
Header Ads
Breaking News

ಸುಳ್ಯದಲ್ಲಿ ಮುಂದುವರಿದ ಕೃಷಿ ತೋಟಗಳಿಗೆ ಕಾಡಾನೆ ದಾಳಿ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೈಪಡ್ಕ ಎಂಬಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿಟ್ಟ ಪರಿಣಾಮ ಈ ಭಾಗದ ರೈತ ಕುಟುಂಬಳಿಗೆ ನಷ್ಟ ಉಂಟಾಗಿದೆ.ಕೈಪಡ್ಕ ನಿವಾಸಿ ಕೃಷ್ಣ ಮಣಿಯಾಣಿ ಅವರ ತೋಟಕ್ಕೆ ನುಗಿದ್ದ ಕಾಡಾನೆಗಳು ೪೦ ಬಾಳೆ ಗಿಡ,ಒಂದು ತೆಂಗಿನ ಗಿಡ, ಹಾಗೂ ಸಮೀಪದ ಕೊಚ್ಚಿ ಗೋಪಾಲ ಎಂಬವರ ತೋಟದಲ್ಲಿ ೬೦ ಬಾಳೆಗಿಡ ಒಂದು ತೆಂಗಿನ ಗಿಡವನ್ನು ಮುರಿದು ಹಾಕಿ ನಷ್ಟ ಉಂಟು ಮಾಡಿದೆ.

 

ಅರಣ್ಯ ಇಲಾಖೆ ಸ್ಥಳಕೆ ಬೇಟಿ ನೀಡಿ ಪರಿಶೀಲನೆ ನಡೆಸಿದೆ.ಈ ಭಾಗದಲ್ಲಿ ಆನೆ ಕಂದಕ ನಿರ್ಮಾಣವಾದರೂ ಇದರ ಪಕ್ಕದಲ್ಲಿ ಕಾಡಾನೆಗಳು ದಾಟಿ ಬರುತ್ತಿವೆ. ಇಲ್ಲಿ ಆನೆ ಕಂದಕ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

Leave a Reply