Header Ads
Header Ads
Header Ads
Breaking News

ಸುಳ್ಯದಲ್ಲಿ ರಾಜ್ಯಮಟ್ಟದ ರಂಗೋತ್ಸವ ರಂಗಮಂದಿರಗಳು ಜನರನ್ನು ಒಗ್ಗೂಡಿಸುತ್ತದೆ ಬೆಂಗಳೂರಿನ ಪ್ರಸಿದ್ದ ಕಲಾ ನಿರ್ದೇಶಕ ಶಶಿಧರ ಅಡಪ ಹೇಳಿಕೆ

ಸಮಾಜದಲ್ಲಿ ದೇವ ಮಂದಿರ ಮತ್ತು ರಂಗ ಮಂದಿರಗಳಿದ್ದು, ದೇವ ಮಂದಿರಗಳಲ್ಲಿ ಜಾತಿ, ಧರ್ಮಗಳ ಮೂಲಕ ಜನರನ್ನು ವಿಂಗಡನೆ ಮಾಡುತ್ತಿದೆ. ಆದರೆ ರಂಗ ಮಂದಿರಗಳು ಜನರನ್ನು ಒಗ್ಗೂಡಿಸುವ ಕೆಲಸ ನಿರ್ವಹಿಸುತ್ತಿದೆ ಎಂದು ಬೆಂಗಳೂರಿನ ಪ್ರಸಿದ್ದ ಕಲಾ ನಿರ್ದೇಶಕ, ರಂಗಕರ್ಮಿ ಶಶಿಧರ ಅಡಪ ಹೆಳಿದರು.

ಅವರು ಬೆಂಗಳೂರಿನ ರಂಗಮಂಟಪದ ಅಶ್ರಯದಲ್ಲಿ ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ರಂಗಭೂಮಿಯ ಗರಿಮೆ ಕಡಿಮೆ ಆಗಿಲ್ಲ. ಇವತ್ತಿನ ಕಾಲದಲ್ಲೂ ರಂಗಭೂಮಿ ತನ್ನ ಹಳೆಯ ಕಲಾ ಸಂಪತ್ತನ್ನು ಉಳಿಸಿಕೊಂಡಿದೆ. ಇದರಿಂದ ಯುವಜನರನ್ನು ಸೆಳೆಯುವಂತೆ ಮಾಡುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಪ್ರಸಿದ್ದ ರಂಗಕರ್ಮಿ ಮತ್ತು ಚಿತ್ರಕಲಾವಿದ ಮೋಹನ ಸೋನಾರನ್ನು ರಂಗಮಂಟಪದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಬೆಂಗಳೂರು ರಂಗಮಂಟಪದ ಅಧ್ಯಕ್ಷ ಪ್ರಕಾಶ್ ಪಿ. ಶೆಟ್ಟಿ ಉಪಸ್ಥಿತರಿದ್ದರು.

ರಂಗಮನೆಯ ಅಧ್ಯಕ್ಷ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ಸ್ವಾಗತಿಸಿ, ನಾಗೇಶ್ ರೈ ವಂದಿಸಿದರು.  ಸಮಾರಂಭದ ಬಳಿಕ ಕೆ.ವೈ. ನಾರಾಯಣ ಸ್ವಾಮಿ ರಚನೆಯ ಪ್ರಕಾಶ್ ಪಿ. ಶೆಟ್ಟಿ ನಿರ್ದೇಶನದ ಪ್ರಸಂಗ ಬೆಂಗಳೂರು ಅಭಿನಯದ ಅನಭಿಜ್ಞ ಶಾಕುಂತಲ ನಾಟಕ ಪ್ರದರ್ಶನಗೊಂಡಿತ್ತು.

ವರದಿ: ಪದ್ಮನಾಭ್ ಸುಳ್ಯ

Related posts

Leave a Reply