Header Ads
Header Ads
Breaking News

ಸುಳ್ಯದಲ್ಲಿ ರಾಜ್ಯ ಮಟ್ಟದ ಹಾಫ್ ಮ್ಯಾರಥಾನ್ ಸ್ಪರ್ಧೆ:ಎನ್.ಮುತ್ತಪ್ಪ ರೈಉದ್ಘಾಟನೆ.

ಸುಳ್ಯ : ಸುಳ್ಯದಲ್ಲಿ ರಾಜ್ಯ ಮಟ್ಟದ ಹಾಫ್ ಮ್ಯಾರಥಾನ್ ಸ್ಪರ್ಧೆಯನ್ನು ಜಯಕರ್ನಾಟಕ ಸಂಘಟನೆಯ ಸ್ಥಾಪಕಾಧ್ಯಕ್ಷ, ಕರ್ನಾಟಕ ಅಥ್ಲೆಟಿಕ್ಸ್ ಎಸೋಸಿಯೇಶನ್ ಅಧ್ಯಕ್ಷ ಎನ್.ಮುತ್ತಪ್ಪ ರೈಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತಡಿದ ಅವರು ಕ್ರೀಡಾ ರಂಗದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳನ್ನು ಬೆಂಬಲಿಸುವ ಮೂಲಕ ಭವಿಷ್ಯದಲ್ಲಿ ರಾಜ್ಯಕ್ಕೆ ಒಲಿಂಪಿಕ್ ಪದಕ ಲಭಿಸಬೇಕು ಎಂಬ ಗುರಿ ನನ್ನದು. ಇಂತಹ ಕನಸು ಮತ್ತು ದೂರದೃಷ್ಟಿಯಿಂದಲೇ ರಾಜ್ಯಾಧ್ಯಕ್ಷ ಪದವಿ ಸ್ವೀಕರಿಸಿದ್ದೇನೆ. ನನ್ನ ಮುಂದೆ ಅನೇಕ ಕನಸಿದೆ. ಗ್ರಾಮೀಣ ಪ್ರದೇಶಗಳ ಕ್ರೀಡಾಪಟುಗಳಿಗೆ ನುರಿತವರಿಂದ ತರಬೇತಿ ಸಂಘಟಿಸುವ ಯೋಜನೆಯಿದೆ ಎಂದರು.ಇನ್ನು ಪಯಸ್ವಿನಿ ನದಿಗೆ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ನೀರಿನ ಕೊರತೆ ನೀಗಿಸಬೇಕು, ಈ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ತೊಡಿಕಾನ ಭಾಗಮಂಡಲ ರಸ್ತೆ ಅಭಿವೃದ್ಧಿಯಾಗಬೇಕು. ಕಾಂಞಗಾಡ್ ಕಾಣಿಯೂರು ರೈಲ್ವೇ ಮಾರ್ಗ ಶೀಘ್ರವಾಗಿ ಮಾಡಬೇಕು. 100 ಕೆ.ವಿ. ಸಬ್‌ಸ್ಟೇಷನ್ ಪೂರ್ತಿಯಾಗಬೇಕು ಎಂಬ ಬೇಡಿಕೆ ನಮ್ಮದಾಗಿದೆ ಎಂದು ಮುತ್ತಪ್ಪ ರೈ ಹೇಳಿದರು
ಪಿ.ಬಿ.ಸುಧಾಕರ ರೈ, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಪ್ಪ, ಬೆಂಗಳೂರು ಜಿಲ್ಲಾಧ್ಯಕ್ಷ ಜಗದೀಶ, ದಿನೇಶ್ ಅಡ್ಕಾರ್, ಸುನಿಲ್ ರೈ, ಸಂತೋಷ್ ಮಡ್ತಿಲ, ವಿಖ್ಯಾತ್ ರೈ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply