Header Ads
Header Ads
Breaking News

ಸುಳ್ಯದಲ್ಲಿ ವಾಜಪೇಯಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ. ವಾಜಪೇಯಿ ಸಾಮಾಜಿಕ ಪರಿಕಲ್ಪನೆಯ ಹರಿಕಾರ.

ಭಾರತವನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ಕಟ್ಟವಲ್ಲಿ ಮತ್ತು ಪರಿವರ್ತನೆಯ ಬಗ್ಗೆ ರೂಪುರೇಷೆ ನೀಡುವ ಮೂಲಕ ದೇಶದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಸಾಮಾಜಿಕ ಪರಿಕಲ್ಪನೆಯ ಹರಿಕಾರ ಎಂದು ಸಾಮಾಜಿಕ ಮುಂದಾಳು ಚಂದ್ರಶೇಖರ ತಳೂರು ಹೇಳಿದರು.ಅವರು ಸುಳ್ಯ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆದ ಭಾರತರತ್ನ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಗೈದು ಮಾತನಾಡಿ ದೇಶ ಜಗತ್ತಿನಲ್ಲಿ ಸೂಪರ್ ಪವರ್ ದೇಶವನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ದೇಶದ ಸರ್ವಾಂಗಿಣ ಉನ್ನತಿಗಾಗಿ ದುಡಿತ ಮಹಾನ್ ವ್ಯಕ್ತಿ ಅಟಲ್‌ಜಿಯವರು.

ರಸ್ತೆಗಳನ್ನು ನಿರ್ಮಾಣ ಮಾಡುವ ಮೂಲಕ ದೇಶದಲ್ಲಿ ಜನರನ್ನು ಜೋಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉದ್ಯಮಿ ಉಪೇಂದ್ರ ಕಾಮತ್, ಉಮೇಶ್ ವಾಗ್ಲೆ, ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ, ಮುಖಂಡರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎಸ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ, ಆಶಾತಿಮ್ಮಪ್ಪ, ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ ಮತ್ತಿತರು ಇದ್ದರು.

Related posts

Leave a Reply