Header Ads
Header Ads
Breaking News

ಸುಳ್ಯದಲ್ಲಿ ವ್ಯಸನ ಮುಕ್ತರ ಸಮಾವೇಶ

ಮದ್ಯದಿಂದ ಮತ್ತು ಇತರ ವ್ಯಸನದಿಂದ ಒಂದು ಕುಟುಂಬ ನಾಶವಾದರೆ ಅದು ನನ್ನ ಕುಟುಂಬ ಹಾಳಾದಷ್ಟೆ ನೋವು ಕೊಡುತ್ತದೆ. ಆದುದರಿಂದ ಸಮಾಜದ ನೋವನ್ನು ಹೋಗಲಾಡಿಸಲು ಎಲ್ಲರೂ ವ್ಯಸನದಿಂದ ಮುಕ್ತರಾಗಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ತಾಲೂಕು ನವಜೀವನ ಸಮಿತಿಗಳು ಪ್ರಗತಿ ಬಂಧು ಸ್ವಸಹಾಯಗಳ ಒಕ್ಕೂಟ ಸುಳ್ಯ ತಾಲೂಕು ಇದರ ಸಹಯೋಗದೊಂದಿಗೆ 151ನೇ ಗಾಂಧಿ ಜಯಂತಿ ಅಂಗವಾಗಿ ಸುಳ್ಯ ಚೆನ್ನಕೇಶವ ದೇವಾಲಯ ವಠಾರದಲ್ಲಿ ನಡೆದ ದುಶ್ವಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮತಿ ಪ್ರಯುಕ್ತ ವ್ಯಸನಮುಕ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ ವ್ಯವಸನ ಮುಕ್ತ ಸಮಾಜದ ಕಲ್ಪನೆ ಮಹಾತ್ಮಗಾಂಧಿಯವರಿಗೆ ಇತ್ತು. ಆದರೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇದನ್ನು ಅಧಿಕಾರಕ್ಕೆ ಬಂದ ಸರಕಾರಗಳು ಮಾಡಬೇಕಿತ್ತು. ಸರಕಾರಕ್ಕೆ ಹೆಚ್ಚಿನ ತೆರಿಗೆಗಳು ಬರುತ್ತಿರುವುದರಿಂದ ಸಂಪೂರ್ಣ ಮದ್ಯಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ನಾವು ಸರಿಯಿದ್ದರೆ ನಮ್ಮನ್ನು ಯಾರು ಹಾಳು ಮಾಡಲು ಸಾಧ್ಯವಿಲ್ಲ. ವ್ಯಸನಗಳ ವಿರುದ್ದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರಂತರ ಜಾಗೃತಿ ಶ್ಲಾಘನೀಯ ಎಂದರು.

ಸಮಾವೇಶದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ಹಮ್ಮಿಕೊಳ್ಳಲಾಗಿತ್ತು. ಪಾನಮುಕ್ತ ತಾಲೂಕಿಗೆ ಹಕ್ಕೊತ್ತಾಯ ನಿರ್ಣಯವನ್ನು ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಗಾಂಧಿ ಜಯಂತಿಯ ಅಂಗವಾಗಿ ಜನಜಾಗೃತಿ ಮತ್ತು ಯೋಜನೆಯ ವತಿಯಿಂದ 151 ಕಡೆ ಏಕಕಾಲದಲ್ಲಿ ಸ್ವಚ್ಚತ್ತಾ ಕಾರ್ಯಕ್ರಮ ನಡೆಯಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಳಂಜ ವಿಶ್ವನಾಥ ರೈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಎ ರಾಮಚಂದ್ರ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ.ಕ ಜಿಲ್ಲೆ ನಿರ್ದೇಶಕ ಸತೀಶ್ ಶೆಟ್ಟಿ ಮತ್ತಿತರರು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *