Header Ads
Header Ads
Header Ads
Breaking News

ಸುಳ್ಯದಲ್ಲಿ ಶ್ರೀ ನಾರಾಯಣಗರು ಜಯಂತಿ ಆಚರಣೆ ನಾರಾಯಣಗುರು ಒಬ್ಬ ಮಾನವತವಾದಿ, ದಾರ್ಶನಿಕ ವ್ಯಕ್ತಿ ಸುಳ್ಯ ಸರ್ಕಾರಿ ಕಾಲೇಜಿನ ಉಪನ್ಯಾಸಕ ಅಚ್ಚುತ್ತ ಪೂಜಾರಿ ಅಭಿಪ್ರಾಯ

 

ಶ್ರೀ ನಾರಾಯಣ ಗುರುಗಳು ಒಬ್ಬ ಮಾನವತವಾದಿಯಾಗಿದ್ದು ಮಾನವ ಕುಲ ಎಲ್ಲಾ ಒಂದೆ ಹೇಳಿದವರು.ಅವರು ಜಾತಿ ಪದ್ದತಿಯನ್ನು ವಿರೋಧಿಸಿದ್ದರು.ಮೊದಲು ಮನುಷ್ಯ ನಂತರ ಜಾತಿ.ಜಾತಿ ಪದ್ದತಿಯನ್ನು ಮನಷ್ಯ ಮಾಡಿಕೊಂಡಿದ್ದಾನೆ ಎಂದು ಅವರ ವಾದವಾಗಿತ್ತು.ಅವರೊಬ್ಬ ಮಾನವತವಾದಿಯಾಗಿದ್ದು ದಾರ್ಶನಿಕ ವ್ಯಕ್ತಿಯಾಗಿದ್ದರು ಎಂದು ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಅಚ್ಚುತ್ತ ಪೂಜಾರಿ ಅಭಿಪ್ರಾಯಪಟ್ಟರು.

ಅವರು ತಾಲೂಕು ಕಚೇರಿ ಮತ್ತು ಸುಳ್ಯ ತಾಲೂಕು ಬಿಲ್ಲವ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ನಾರಾಯಣಗುರು ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು.ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಎನ್.ಎಸ್.ಡಿ ವಿಠಲದಾಸ್,ಗೌರವಾಧ್ಯಕ್ಷ ಶೀನಪ್ಪ ಪೂಜಾರಿ,ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ದುಗಲಡ್ಕ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply