Header Ads
Header Ads
Breaking News

ಸುಳ್ಯದಲ್ಲಿ ಸಹಕಾರ ಸಂಘಗಳ ಮೈಸೂರು ವಲಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ

ನೋಟ್ ಬ್ಯಾನ್, ಆದಾಯ ತೆರಿಗೆ ಇಲಾಖೆಯ ಕಠಿಣವಾದ ಕಾನೂನುಗಳು, ಜಿಎಸ್‌ಟಿಗಳಿಂದ ರಾಜ್ಯದ ಸಹಕಾರಿ ಸಂಘಗಳ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಮೈಸೂರು ವಲಯದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್ ಹೇಳಿದರು. ಅವರು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ಹಾಗೂ ಸುಳ್ಯ ಶ್ರೀ ವೆಂಕಟರಮಣ ಸೊಸೈಟಿ ಆಶ್ರಯದಲ್ಲಿ ಕೆ.ವಿ.ಜಿ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿ ನಡೆದ ಮೈಸೂರು ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಹಾಗೂ ಸಿಬ್ಬಂಧಿಗಳಿಗೆ ನಡೆದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಆರ್ಥಿಕ ಹಿಂಜರಿತ ಇದ್ದರೂ ಕರಾವಳಿ ಭಾಗ ಮತ್ತು ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳು ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲದ ಅಧ್ಯಕ್ಷೆ ಕೆ. ಲಲಿತಾ ಜಿ.ಟಿ.ದೇವೇಗೌಡ ವಹಿಸಿದ್ರು. ಈ ಸಂದರ್ಭ ರಾಜ್ಯ ಮಹಾಮಂಡಲದ ಉಪಾದ್ಯಕ್ಷ ಡಾ. ಬಿ.ಡಿ.ಭೂಕಾಂತ್, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್, ರಾಜ್ಯ ಮಹಾಮಂಡಲದ ಮಾಜಿ ಅಧ್ಯಕ್ಷ ಡಾ. ಶೇಖರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *