Header Ads
Breaking News

ಸುಳ್ಯದಲ್ಲಿ ಸ್ವಚ್ಚ ಮೇವ ಜಯತೇಯ ಸ್ವಚ್ಚತಾ ರಥ ಸಂಚಾರದ ಸಮಾರೋಪ ಕಾರ್ಯಕ್ರಮ

ಸ್ವಚ್ಚ ಗ್ರಾಮ ಯೋಜನೆಯ ಕಲ್ಪನೆಗಳು ಒಂದು ಗ್ರಾಮ ಪಂಚಾಯತ್‍ಗಳಿಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಸ್ವಚ್ಚತೆಯ ಭಾವನೆಗಳು ಇತರ ಪಂಚಾಯತ್‍ಗಳಿಗೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಪ್ರೇರಣೆ ಆಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ಅವರು ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸುಳ್ಯ, ಅಮರಮೂಡ್ನೂರು ಗ್ರಾ.ಪಂ ಹಾಗೂ ಗ್ರಾಮದ ಎಲ್ಲಾ ಶಾಲೇ, ಅಂಗನವಾಡಿ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕುಕ್ಕುಜಡ್ಕ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸ್ವಚ್ಚ ಮೇವ ಜಯತೇ ಸ್ವಚ್ಚತಾ ಆಂದೋಲನದ ಸ್ವಚ್ಚತಾ ರಥ ಸಂಚಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ಯ ಸಿಕಿ 70 ವರ್ಷ ಕಳೆದರು ಸ್ವಚ್ಚತೆಯ ಜಾಗೃತಿ ಆಗಿಲ್ಲ. ಕಳೆದ ಕೆಲವು ವರ್ಷಗಳಿಂದ ಜನರಲ್ಲಿ ಜಾಗೃತಿಗಳು ಮೂಡತೊಡಗಿದೆ. ಸ್ವಚ್ಚತೆಯ ಜಾಗೃತಿಗಳು ಕೇವಲ ಸಂಘಸಂಸ್ಥೆಗಳಿಗೆ, ಪಂಚಾಯತ್‍ಗಳಿಗೆ ಸೀಮಿತವಾಗಬಾರದು. ಪರಿಸರದ ಎಲ್ಲೇಡೆ ಪ್ರಚಾರದ ಮೂಲಕ ಜಾಗೃತಿ ಆಗಬೇಕು. ಸ್ವಚ್ಚ ಮೇವ ಜಯತೇ ಯಂತಹ ಕಾರ್ಯಕ್ರಮಗಳು ಪ್ರತಿಯೊಬ್ಬರ ಬಾಳಿನಲ್ಲೂ ಪ್ರೇರಣೆ ಆಗಬೇಕು ಎಂದು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ ಸ್ವಚ್ಚತಾ ಆಂದೋಲನಗಳು ಕೇವಲ ಅಧಿಕಾರದ ಮಟ್ಟದಲ್ಲಿ ನಡೆದರೇ ಸಾಲದು. ತಳಮಟ್ಟದಲ್ಲಿ ಸ್ವಚ್ಚತೆ ಆಂದೋಲನಗಳು ಆದರೆ ಪರಿಸರ ಸ್ವಚ್ಚವಾಗುತ್ತದೆ. ಈ ಮೂಲಕ ದೇಶದ ಅಭಿವೃದ್ದಿಗೆ ಸ್ವಚ್ಚತಾ ಆಂದೋಲನಗಳು ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಎಪಿಎಂಸಿ ಸದಸ್ಯೆ ಸುಕನ್ಯಾ ಭಟ್, ಚೊಕ್ಕಾಡಿ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಮೂಕಮಲೆ, ಅರಂತೋಡು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್, ಸ್ವಚ್ಚತಾ ರಥದ ಮೇಲ್ವಿಚಾರಕ ಕೃಷ್ಣಪ್ಪ, ಉಬರಡ್ಕ ಗ್ರಾ,ಪಂ ಪಿಡಿಒ ಸಂದೇಶ್, ಕುಕ್ಕುಜಡ್ಕ ಸೊಸೈಟಿ ಕಾರ್ಯನಿರ್ವಾಹಣದಿಕಾರಿ ಮೋಹನ ಗೌಡ, ಅಮರಮೂಡ್ನೂರು ಪಂಚಾಯತ್ ಪಿಡಿಒ ಆಕಾಶ್, ಕಾರ್ಯದರ್ಶಿ ದಯಾನಂದ್ ಪತ್ತುಕುಂಜ, ಅಮರಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಸಹಕಾರಿ ಸಂಘ್ ನಿರ್ದೇಶಕರು, ಶಾಲಾ ಮುಖ್ಯೋಪಾಧ್ಯಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸ್ವಚ್ಚತೆ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಶಾಲೆ, ಅಂಗನವಾಡಿ, ಅಂಗಡಿಗಳಿಗೆ ಹಸಿ ಕಸ ಮತ್ತು ಒಣ ಕಸ ವಿಲೇವಾರಿಗಾಗಿ ಡಸ್ಟ್ ಬಿನ್‍ಗಳ ವಿತರಣೆಯನ್ನು ಶಾಸಕರು ಮಾಡಿದರು.

Related posts

Leave a Reply

Your email address will not be published. Required fields are marked *