Header Ads
Header Ads
Breaking News

ಸುಳ್ಯದ ಅಜ್ಜಾವರದಲ್ಲಿ ಚಿರತೆ ದಾಳಿ: ಜನರಲ್ಲಿ ಮನೆಮಾಡಿದ ಆತಂಕ

ಸುಳ್ಯ:ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಚಿರತೆ ಕರುವೊಂದರ ಮೇಲೆ ಧಾಳಿ ನಡೆಸಿ, ಅರ್ಧ ತಿಂದು ಹಾಕಿದ್ದ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.ಅಜ್ಜಾವರ ಗ್ರಾಮದ ಕಾಡಿನಂಚಿನ ಪ್ರದೇಶದಲ್ಲಿ ಚಿರತೆ ಇರುವ ಕುರಿತು ಈ ಹಿಂದೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಅರಣ್ಯ ಇಲಾಖೆ ಕರ್ಲಪ್ಪಾಡಿಯಲ್ಲಿ ಬೋನ್ ಇರಿಸಿ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು. ಇದೀಗ ತುದಿಯಡ್ಕ ಪ್ರದೇಶದಲ್ಲಿ ದನದ ಕರು ಚಿರತೆ ಧಾಳಿಗೆ ಸತ್ತಿದೆ. ಅದರ ಮೇಲಿನ ಗಾಯವನ್ನು ನೋಡುವಾಗ ನಾಯಿ ಚಿರತೆ ಗುಂಪು ಧಾಳಿ ಮಾಡಿರುವಂತೆ ಕಾಣುತ್ತದೆ. ಇದರ ಬಗ್ಗೆ ತನಿಕೆ ನಡೆಸಿ ಬಳಿಕ ಮಾಹಿತಿ ತಿಳಿಯಬೇಕಾಗಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

Related posts

Leave a Reply