Header Ads
Header Ads
Breaking News

ಸುಳ್ಯದ ಅಜ್ಜಾವರದಲ್ಲಿ ತೆರೆದಿರುವ ಮದ್ಯದಂಗಡಿ ತೆರವುಗೊಳಿಸಲು ವಿಶೇಷ ಗ್ರಾಮಸಭೆ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆರೆದಿರುವ ಮದ್ಯದಂಗಡಿಯನ್ನು ತೆರವುಗೊಳಿಸಲು ಆಗ್ರಹಿಸಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಅಜ್ಜಾವರವನ್ನು ಮದ್ಯಮುಕ್ತ ಗ್ರಾಮಕ್ಕಾಗಿ ಮದ್ಯದಂಗಡಿಯನ್ನು ತೆರವುಗೊಳಿಸಬೇಕು ಎಂದು ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೀನಾ ಕರುಣಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮದ್ಯದಂಗಡಿ ನಮ್ಮ ಗ್ರಾಮಕ್ಕೆ ಬಂದ ಅನಿಷ್ಠ. ಇದನ್ನು ಕೂಡಲೇ ಇಲ್ಲಿಂದ ತೆರವುಗೊಳಿಸಬೇಕು. ಮದ್ಯದಂಗಡಿಗಳನ್ನು ತೆರವುಗೊಳಿಸಲು ಎಲ್ಲಾ ಅದಿಕಾರಿಗಳಿಗೆ, ಜಿಲ್ಲಾ ಅಧಿಕಾರಿಗಳಿಗೆ ರಾಜಕೀಯ ಮುಖಂಡರಿಗೆ, ಸಚಿವರಿಗೆ ಮುಖ್ಯಮಂತ್ರಿಗಳಿಗೆ ಗ್ರಾಮದ ಎಲ್ಲಾ ಸಂಘಸಂಸ್ಥೆಗಳ ಮೂಲಕ ಗ್ರಾಮ ಪಂಚಾಯತ್ ಸೇರಿ ಮನವಿ ಮಾಡಲಾಗುವುದು. ಅಲ್ಲದೇ ಕಾನೂನು ರೀತಿಯಲ್ಲಿ ಕೂಡ ಹೋರಾಟ ಮಾಡಲಾಗುವುದು. ಇದಕ್ಕೆಲ್ಲ ಮದ್ಯದಂಗಡಿ ತೆರವುಗೊಳಿಸಲು ಸಾಧ್ಯವಾಗದಿದ್ದರೆ ಗ್ರಾಮಸ್ಥರು ಎಲ್ಲಾರು ಸೇರಿ ಕಾನೂನನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತೀರ್ಮಾಣ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿ.ಪಂ ಸದಸ್ಯ ಧನಂಜಯ ಅಡ್ಪಂಗಾಯ ಊರಿನ ಆರೋಗ್ಯಕ್ಕಾಗಿ ಗ್ರಾಮಸ್ಥರಾದ ನಾವೆಲ್ಲರೂ ಹೋರಾಟ ಮಾಡಬೇಕು. ಮದ್ಯದಂಗಡಿ ತೆರವುಗೊಳಿಸಲು ಸಾಧ್ಯವಾಗದಿದ್ದರೆ ಕಾನೂನು ಹೋರಾಟ ಮಾಡಬೇಕು. ಕೇಸು ಹಾಕಿಸೊಕೊಂಡು ಮದ್ಯದಂಗಡಿಯನ್ನು ನಿರ್ಣಾಮ ಮಾಡಬೇಕು. ಗಾಂಧಿಜೀಯವರ ಕಲ್ಪನೆಯಂತೆ ಮದ್ಯ ಮುಕ್ತ ಭಾರತಕ್ಕಾಗಿ ಹೋರಾಟ ಮಾಡಬೇಕು. ಇದಕ್ಕೆ ಮಹಿಳೆಯರ ಸಂಪೂರ್ಣ ಬೆಂಬಲ ಬೇಕು. ಜನಬೆಂಬಲದ ಮೂಲಕ ಹೋರಾಟ ಮಾಡಬೇಕು ಎಂದು ಹೇಳಿದರು.

ಗ್ರಾಮ ಸಭೆ ಆರಂಭವಾಗುತ್ತಿದ್ದಂತೆ ವಿಶೇಷ ಗ್ರಾಮ ಸಭೆ ಕರೆದ ಬಗ್ಗೆ ಯಾವುದೇ ಮಾಹಿತಿ ಗ್ರಾಮಸ್ಥರಿಗೆ ನೀಡಿಲ್ಲ. ಪಂಚಾಯತ್ ಅಧಿಕಾರಿಗಳು ಬೇಜಾವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಧ್ವನಿವರ್ಧಕದ ಮೂಲಕ ಪ್ರಚಾರ ಕೂಡ ಮಾಡಿಲ್ಲ. ಗ್ರಾಮದ ಅಭಿವೃದ್ದಿಯ ದೃಷ್ಟಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಕಾರಾತ್ಮಕವಾಗಿ ಸ್ಪಂಧಿಸಬೇಕು ಎಂದು ಗ್ರಾಮಸ್ಥರಾದ ನಾರಾಯಣ ಮತ್ತು ರಾಮಚಂದ್ರ ಹೇಳಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಅಡ್ಪಂಗಾಯ, ಜಯಂತಿ ಅಜ್ಜಾವರ ಮಾತನಾಡಿದರು.
ಸಭೆಯಲ್ಲಿ ಗ್ರಾ.ಪಂ ಉಪಾದ್ಯಕ್ಷೆ ಸುಂದರಿ ನೆಹರೂನಗರ, ಮಾಜಿ ಅದ್ಯಕ್ಷ ಪ್ರಸಾದ್ ರೈ ಮೇನಾಲ, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಶೀಲ, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

Leave a Reply