Header Ads
Header Ads
Breaking News

ಸುಳ್ಯದ ಅಜ್ಜಾವರ ಮದ್ಯದಂಗಡಿ ವಿರುದ್ದ ಗ್ರಾಮಸ್ಥರ ಬೃಹತ್ ಪ್ರತಿಭಟನೆ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪೆಲತ್ತಡಿ ಎಂಬಲ್ಲಿ ತಲೆ ಎತ್ತಿರುವ ಮದ್ಯದಂಗಡಿ ವಿರುದ್ದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮದ್ಯದಂಗಡಿ ತೆರವಿಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಮದ್ಯದಂಗಡಿ ಬಗ್ಗೆ ಚರ್ಚಿಸಲು ನ. ೧೬ರಂದು ಅಜ್ಜಾವರ ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆಯನ್ನು ಕರೆದು ಬಳಿಕ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನೆಯಲ್ಲಿ ನಿರ್ಧರಿಸಿಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯರವರು ಮಗ್ಧ ಜನರನ್ನು ಬಲಿಯಲು ನಾವು ಬಿಡುವುದಿಲ್ಲ. ಮದ್ಯ ಮುಕ್ತ ಗ್ರಾಮ ನಮ್ಮ ಕಲ್ಪನೆ. ಕೂಡಲೇ ಈ ಅಂಗಡಿಯನ್ನು ತೆರವು ಮಾಡಬೇಕು ಇಲ್ಲದಿದ್ದರೆ ಗ್ರಾಮಸ್ಥರೇ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಸಭೆ ಮುಗಿದ ಬಳಿಕ ಗ್ರಾಮ ಪಂಚಾಯತ್ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಗ್ರಾಮಸ್ಥರು ಪೆಲತ್ತಡಿಯ ಮದ್ಯದಂಗಡಿ ಎದುರು ಸೇರಿ ಮದ್ಯದಂಗಡಿ ತೆರವುಗೊಳಿಸಲು ಆಗ್ರಹಿಸಿ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಮದ್ಯದಂಗಡಿ ಎದುರೇ ಪೋಲಿಸರು ತಡೆದರು. ಈ ವೇಳೆ ಗ್ರಾಮಸ್ಥರು ಮತ್ತು ಪೋಲಿಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ, ತಹಶೀಲ್ದಾರ್, ಅಬಕಾರಿ ಇಲಾಖೆಯವರು ಬರದೇ ನಾವು ಸ್ಥಳ ಬಿಟ್ಟು ಕದಲುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಮದ್ಯದಂಗಡಿಯನ್ನು ಕಾನೂನಿನಲ್ಲಿ ತೆರವು ಮಾಡಿ. ಬಲತ್ಕಾರವಾಗಿ ನುಗ್ಗಿ ಧ್ವಂಸ ಮಾಡಿದರೆ ನಿಮ್ಮ ಮೇಲೆ ಕಾನೂನು ರೀತಿಯಲ್ಲಿಯೇ ಎಲ್ಲರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಮಹಿಳೆಯರನ್ನು ಮುಂದೆ ಹಾಕಿಕೊಂಡು ಬರುವುದು ಬೇಡ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ಅದನ್ನು ತೆರವುಗೊಳಿಸಲು ಕಂದಾಯ ಇಲಾಖೆ ಇದೆ. ನೀವು ಕಾನೂನು ಕೈಗೆತ್ತಿಕೊಳ್ಳಬೇಡಿ. ಕಾನೂನು ಕೈಗೆತ್ತಿಕೊಂಡರೇ ಕಠಿಣ ಕ್ರಮಕೈಗೊಳ್ಳುತ್ತೇನೆ ಎಂದು ಸುಳ್ಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಹೇಳಿದರು.

ಪ್ರತಿಭಟನೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಜಿ.ಪಂ ಸದಸ್ಯೆ ಪುಷ್ಪಾವತಿ ಬಾಳಿಲ, ಅಜ್ಜಾವರ ಗ್ರಾ,ಪಂ ಅಧ್ಯಕ್ಷೆ ಬೀನಾ ಕರುಣಾಕರ, ಮುಖಂಡರಾದ ಮಹೇಶ್ ರೈ ಮೇನಾಲ, ಸುಧೀರ್ ರೈ ಮೇನಾಲ ಕರುಣಾಕರ ಅಡ್ಪಂಗಾಯ, ಪ್ರಸಾದ್ ರೈ ಮೇನಾಲ, ಸುಭೋದ್ ಶೆಟ್ಟಿ ಮೇನಾಲ, ನವೀನ್ ರೈ ಮೇನಾಲ, ಎನ್.ಎ.ರಾಮಚಂದ್ರ, ಸಂತೋಷ್ ಕುಮಾರ್ ರೈ, ಎ.ಎಸ್. ಮನ್ಮಥ, ರಾಜೇಶ್ ಶೆಟ್ಟಿ ಮೇನಾಲ,ಸುಂದರ ನೆಹರೂನಗರ, ಮಿಥುನ್ ಕರ್ಲಪ್ಪಾಡಿ, ಚೈತನ್ಯ ಸೇವಾಶ್ರಮದ ಯೋಗೇಶ್ವರನಾಂದ ಸ್ವಾಮೀಜಿ, ಹರಿಣಾಕ್ಷಿ ಬೇಲ್ಯ, ದಿವ್ಯ ಸುದೀರ್, ಆನಂದ ರಾವ್ ಕಾಂತಮಂಗಲ, ರೂಪಾನಂದ ಕರ್ಲಪ್ಪಾಡಿ, ಹನೀಫ್ ಅಜ್ಜಾವರ. ರಾಹುಲ್ ಅಡ್ಪಂಗಾಯ, ವಸಂತಿ ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply