Header Ads
Header Ads
Header Ads
Breaking News

ಸುಳ್ಯದ ಎಲಿಮಲೆಯ ತಳೂರು ಬಳಿ ಭೀಕರ ಅಪಘಾತ: ಓರ್ವ ಮೃತ್ಯು-ಮೂವರಿಗೆ ಗಂಭೀರ ಗಾಯ

ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಎಲಿಮಲೆಯ ತಳೂರು ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಜೀಪು ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.


ಸುಬ್ರಹ್ಮಣ್ಯದಿಂದ ಸುಳ್ಯ ಕಡೆಗೆ ಬರುತ್ತಿದ್ದ ಸರಕಾರಿ ಬಸ್ ಮತ್ತು ಸುಳ್ಯದಿಂದ ಹರಿಹರ ಪಲ್ಲತಡ್ಕ ಕಡೆಗೆ ಹೊಗುತ್ತಿದ್ದ ಜೀಪು ಪರಸ್ಪರ ಮುಖಾಮುಖಿ ಢಿಕ್ಕಿ ಹೊಡೆದಿದ್ದು. ಅಪಘಾತದ ರಭಸಕ್ಕೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಹಾಳೆಮಜಲಿನ ಶಶಿ ಎಂಬವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಘಟನೆಯಲ್ಲಿ ಜೀಪು ಚಲಾಯಿಸುತ್ತಿದ್ದ ರೋಹಿತ್ ಸಹಿತ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಕೇಸು ದಾಖಲಿಸಿಕೊಂಡಿದ್ದಾರೆ.
ವರದಿ: ಪದ್ಮಾನಾಭ ಸುಳ್ಯ

Related posts

Leave a Reply