Header Ads
Header Ads
Breaking News

ಸುಳ್ಯದ ಕೊಚ್ಚಿಗುಡ್ಡೆಯ ಮಲೆತೋಟ ಎಂಬಲ್ಲಿ ಭೂ ಕುಸಿತದ ಭೀತಿ : ಆತಂಕದಲ್ಲಿ ಕೊಚ್ಚಿಗುಡ್ಡೆಯ ಜನತೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕೊಚ್ಚಿ ಗುಡ್ಡೆಯ ಮಲೆತೋಟ ಎಂಬಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಅಪಾಯ ಸೃಷ್ಟಿಯಾಗಿದೆ. ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿ ಇಲ್ಲಿನ ಸ್ಥಳೀಯರಿಗೆ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಈ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಐದಾರು ಕಡೆ ಭೂಮಿಯ ಒಡಲಿನಿಂದ ನೀರು ಉದ್ಭವ ಆಗಿದ್ದು, ಕುಸಿಯುವ ಸಂಭವವಿರಬಹುದೇ ಎಂದು ಜನತೆ ಆತಂಕಗೊಂಡಿದ್ದಾರೆ. ಅಲ್ಲಿಯ ಪರಿಸ್ಥಿತಿಯನ್ನು ನೋಡಿದಾಗ ಕಲ್ಲು ಮಣ್ಣು ಮಿಶ್ರಿತವಾದಂತ ನೀರು ಹರಿದಂತೆ ಕಾಣುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಡಿಕೇರಿಯಲ್ಲಿ ಆದ ಘಟನೆಯನ್ನು ನೆನೆದು ಇಲ್ಲಿಯ ಜನತೆ ಭಯಭೀತರಾಗಿದ್ದಾರೆ. ಕೂಡಲೇ ಭೂ ತಜ್ಞರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *