Header Ads
Header Ads
Breaking News

ಸುಳ್ಯದ ಕೊಡಿಯಾಲಬೈಲಿನಲ್ಲಿ ಸಾರ್ವಜನಿಕ ರುದ್ರಭೂಮಿ ಉದ್ಘಾಟನೆ

ಸುಮಾರು 50ಲಕ್ಷ ವೆಚ್ಚದಲ್ಲಿ ಸುಳ್ಯ ಲಯನ್ಸ್‌ಕ್ಲಬ್ ಮತ್ತು ಉಬರಡ್ಕ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಿರ್ಮಾಣವಾದ ಸಾರ್ವಜನಿಕ ರುದ್ರಭೂಮಿ ವಿಮುಕ್ತಿ ಲೋಕಾರ್ಪಣೆ ಮತ್ತು ಉಬರಡ್ಕ ಪಂಚಾಯಿತಿಗೆ ರುದ್ರಭೂಮಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ರುದ್ರಭೂಮಿ ವಿಮುಕ್ತಿಯ ನಿರ್ಮಾಣದ ರೂವಾರಿ ಪ್ರಾಂತೀಯ ಅಧ್ಯಕ್ಷ ಲ. ಜಯರಾಂ ದೇರಪ್ಪಜ್ಜನಮನೆ ಮತ್ತು ಲಯನ್ಸ್ ಜಿಲ್ಲಾ ಗವರ್ನರ್ ಹೆಚ್.ಆರ್.ಹರೀಶ್ ಅವರು ಉಬರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ಅವರಿಗೆ ವಿಮುಕ್ತಿ ರುದ್ರಭೂಮಿಯನ್ನು ಹಸ್ತಾಂತರಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಹೆಚ್.ಆರ್.ಹರೀಶ್ ಮಾತನಾಡಿ, ರುದ್ರಭೂಮಿ ಇವತ್ತು ಉದ್ಯಾನವನ ರೂಪದಲ್ಲಿ ನಿರ್ಮಿಣ ಆಗಿದೆ, ಉತ್ತಮ ವಾತಾವರಣ, ಬೆಳಕು ಇದಕ್ಕೆ ಪೂರಕವಾಗಿದೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ ಎಂದರು.
ಉಬರಡ್ಕ ಗ್ರಾ.ಪಂ ಅಧ್ಯಕ್ಷ ಹರೀಶ್ ರೈ ಉಬರಡ್ಕ ಮಾತನಾಡಿ ಉದ್ಯಾನವನದ ರೂಪದಲ್ಲಿರುವ ರುದ್ರಭೂಮಿಯನ್ನು ಇವತ್ತು ಇರುವ ರೀತಿಯಲ್ಲಿ ಅದನ್ನು ಸ್ವಚ್ಚವಾಗಿ ಕಾಪಾಡುವುದು ಗ್ರಾಮ ಪಂಚಾಯತ್ ಕರ್ತವ್ಯ. ಇದಕ್ಕೆ ಶಾಸಕರ ನಿಧಿ ಮತ್ತು ಪಂಚಾಯತ್‌ನ ಹಲವು ಅನುದಾನಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರಿಗೆ ತುಂಬ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ರೋಟರಿ ರಾಜ್ಯಪಾಲ ಎ.ಎಸ್.ಎನ್ ಹೆಬ್ಬಾರ್, ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಲಯನ್ಸ್ ಪದಾಧಿಕಾರಿಗಳಾದ ಸುದರ್ಶನ ಪಡಿಯಾರ್, ಮಂಗೇಶ್ ಭಟ್, ಹರಿಪ್ರಸಾದ್, ವಸಂತಕುಮಾರ್ ಶೆಟ್ಟಿ, ಹರಿಪ್ರಸಾದ್ ಕೆ.,ಪದ್ಮರಂಗನಾಥ್, ಲಯನ್ಸ್ ಪ್ರಾಂತೀಯ ಪ್ರಥಮ ಮಹಿಳೆ ಲಮಿತಾ ಜಯರಾಮ್, ಸುಳ್ಯ ಲಯನೆಸ್ ಅಧ್ಯಕ್ಷೆ ದಿವ್ಯಾ ನಂಜೆ, ಸುಳ್ಯ ಲಯನ್ಸ್ ಅಧ್ಯಕ್ಷ ಚಂದ್ರಶೇಖರ್ ನಂಜೆ, ಡಿ.ಟಿ.ದಯಾನಂದ, ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪದ್ಮನಾಭ ಸುಳ್ಯ

Related posts

Leave a Reply