Header Ads
Header Ads
Breaking News

ಸುಳ್ಯದ ತೊಡಿಕಾನದಲ್ಲಿ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸುಳ್ಯ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 9ರಂದು ನಡೆಯಲಿದ್ದು, ಸಾಹಿತಿ ಲಲಿತಾಜ ಮಲ್ಲಾರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವಠಾರದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸಾಹಿತ್ಯ ಸಮ್ಮೇಳನಾ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಹರಪ್ರಸಾದ್ ತುದಿಯಡ್ಕ ಮತ್ತು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ಮಾತನಾಡಿ ಜಿಲ್ಲಾ ಸಾಹಿತ್ಯ ಪರಿಷತ್ತ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಮಲ್ಲಿಕಾರ್ಜುನ ದೇವಾಲಯ ತೊಡಿಕಾನ, ೨೩ನೇ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿಯ ಆಶ್ರಯದಲ್ಲಿ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಾ| ಕೀಲಾರು ಗೋಪಾಲಕೃಷ್ಣ ವೇದಿಕೆ-ಉಳುವಾರು ಪಠೇಲ್ ಮಾಲಪ್ಪ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಲಲಿತಾಜ ಮಲ್ಲಾರ ವಹಿಸಿಲಿದ್ದಾರೆ ಸಮ್ಮೇಳನಾದ ಉದ್ಘಾಟನೆಯನ್ನು ಬೆಂಗಳೂರು ಕೇಂದ್ರಿಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥ ಹಾಗೂ ಸಂಸ್ಕೃತಿ ಚಿಂತಕ ಮತ್ತು ನಾಟಕಗಾರ ಡಾ| ಕೆ.ವೈ. ನಾರಾಯಣ ಸ್ವಾಮಿ ನೆರವೇರಿಸಲಿದ್ದಾರೆ. ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಚಾಲನೆ ನೀಡಲಿದ್ದಾರೆ. ಅರಂತೋಡು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಕೊಡಂಕೇರಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ, ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಕನ್ನಡ ಧ್ವಜಾರೋಹಣವನ್ನು ತಾಲೂಕು ಕ.ಸಾ.ಪ ಅಧ್ಯಕ್ಷ ಡಾ| ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ. ಪುಸ್ತಕ ಪ್ರದರ್ಶನಕ್ಕೆ ಶಾಸಕ ಎಸ್. ಅಂಗಾರ, ವಸ್ತು ಪ್ರದರ್ಶನವನ್ನು ತಾಲೂಕು ಪಂಚಾಯತ್ ಅದ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟನೆ ಮಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ವಿಜಯವಾಣಿ ಪತ್ರಿಕೆ ಸ್ಥಾನೀಯ ಸಂಪಾದಕ ಸಿ.ಕೆ.ಮಹೇಂದ್ರ ಅನಾವರಣ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾದ್ಯಕ್ಷ ಮಾತನ್ನು ವಸಂತ ಶೆಟ್ಟಿ ಬೆಳ್ಳಾರೆ ಮಾಡುವರು.

ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರು ವಿಜಯ ಕರ್ನಾಟಕ ಪತ್ರಿಕೆ ಉಪಸಂಪಾದಕ ಹರೀಶ್ ಕೇರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿ ನಡೆಯಲಿದೆ. ಬಳಿಕ ತಾಲೂಕಿನ ಹೆಸರಾಂತ ಗಾಯಕರಿಂದ ಕವಿ, ಕಾವ್ಯ ಗಾಯನ ನಡೆಯಲಿದೆ. ಅಪರಾಹ್ನ ನಾಡು, ನುಡಿ-ಸವಾಲುಗಳು ಮತ್ತು ಎಚ್ಚರ ಎಂಬ ವಿಷಯದ ಮೇಲೆ ವಿಚಾರಗೋಷ್ಟಿ ನಡೆಯಲಿದೆ. ಗೋಷ್ಟಿಯ ಅಧ್ಯಕ್ಷತೆಯನ್ನು ಪುತ್ತೂರಿನ ಅಡಿಕೆ ಪತ್ರಿಕೆಯ ಸಂಪಾದಕ ನಾ. ಕಾರಂತ ಪೆರಾಜೆ ವಹಿಸಲಿದ್ದಾರೆ. ಪ್ರಾಕೃತಿಕ ಸವಾಲುಗಳ ಬಗ್ಗೆ ಗೋಪಾಲ ಪೆರಾಜೆ, ಕೃಷಿ ಸವಾಲುಗಳ ಬಗ್ಗೆ ಡಾ| ಕರುಣಾಕರ ನಿಡಿಂಜಿ ಮತ್ತು ಕನ್ನಡದ ಸವಾಲುಗಳ ಬಗ್ಗೆ ದುರ್ಗಾಕುಮಾರ್ ನಾಯರ್‌ಕೆರೆ ವಿಷಯ ಮಂಡನೆ ಮಾಡಲಿದ್ದಾರೆ.
ಸಮಾರೋಪ ಭಾಷಣವನ್ನು ಜಿಲ್ಲಾ ಪೋಲಿಸ್ ಅಧಿಕ್ಷಕ ಡಾ| ರವಿಕಾಂತೇ ಗೌಡ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿಲಿದ್ದಾರೆ. ಸಮಾರಂಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅದ್ಯಕ್ಷ ಡಾ| ಕೆ.ವಿ. ಚಿದಾನಂದ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾ.ಪಂ ಸದಸ್ಯೆ ಪುಷ್ಪಾ ಮೇದಪ್ಪ ಗೌಡ ಮೊದಲಾದವರು ಭಾಗವಹಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ 10 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ಸಮಾಜಸೇವೆಗೆ ಸುಶೀಲಮ್ಮ ಮರುವಳ, ಸಹಕಾರಿ ಆಡಳಿತ ಸೇವೆಗೆ ವಿಶ್ವನಾಥ ನಾಯರ್, ಪೋಲಿಸ್ ಸೇವೆಯಲ್ಲಿ ಎ.ಜಿ. ವೆಂಕಟ್ರಮಣ, ಪಂಚಾಯತ್ ಆಡಳಿತ ಸೇವೆಗೆ ಯು.ಡಿ. ಶೇಕರ್, ಉರಗ ಸ್ನೇಹಿ ಶಿವಾನಂದ ಕುಕ್ಕುಂಬಳ, ಉದ್ಯಮ ಮತ್ತು ಸಮಾಜಸೇವೆಗೆ ಯು.ಬಿ.ಚಕ್ರಪಾಣಿ, ಸ್ವ ಉದ್ಯೋಗ ಕ್ಷೇತ್ರದಲ್ಲಿ ಎಂ.ಕೆ. ರಾಮಚಂದ್ರ, ಕಲೆ, ಸಾಂಸ್ಕೃತಿಕ ಸೇವೆಗೆ ಮಂಜುನಾಥ ಬಂಗ್ಲೆಗುಡ್ಡೆ, ದುಡಿ ಮತ್ತು ಕೊಳಲು ವಾದನದ ಕ್ಷೇತ್ರದಲ್ಲಿ ಪಿ.ಜಯರಾಮ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಬಳಿಕ ಕುಂದಾಪರದ ಪ್ರಸಿದ್ದ ರೂಪಕಲಾ ನಾಟಕ ತಂಡದವರಿಂದ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರನ್ನೊಳಗೊಂಡ ಕರಾವಳಿ ಮುತ್ತು ಸತೀಶ್ ಪೈ ನಿರ್ದೇಶನದ ಕನ್ನಡ ಹಾಸ್ಯಮಯ ನಾಟಕ ಮೂರು ಮುತ್ತು ನಡೆಯಲಿದೆ. ಬಳಿಕ ಸರಕಾರಿ ಪ್ರಾಥಮಿಕ ಶಾಲೆ ತೊಡಿಕಾನ, ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ದೀಪಕ್ ರೈ ಪಾಣಾಜೆರವರ ಸಾರಥ್ಯದಲ್ಲಿ ಮಸ್ಕಿರಿ ಕುಡ್ಲ ತಂಡದವರಿಂದ ಹಾಸ್ಯೋತ್ಸವ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಸಂಚಾಲಕ ಕೆ.ಆರ್. ಗಂಗಾಧರ್, ಸೋಮಶೇಖರ್ ಕೊಯಿಂಗಾಜೆ, ಕೇಶವ ಕೊಳಲುಮೂಲೆ, ಆನಂದ ಕಲ್ಲುಗದ್ದೆ, ಕಿಶೋರ್ ಕುಮಾರ್ ಉಳುವಾರು ಮೊದಲಾದವರು ಉಪಸ್ಥಿತರಿದ್ದರು

Related posts

Leave a Reply