Header Ads
Header Ads
Breaking News

ಸುಳ್ಯದ ತೊಡಿಕಾನ ಸೀಮೆಯ ದೈವಗಳ ಧರ್ಮ ನಡಾವಳಿ ವಿಚಾರ:ಅಂತಿಮ ನಿರ್ಧಾರ ಕೈಗೊಳ್ಳಲು ಸಭೆ

ತೊಡಿಕಾನ ಸೀಮೆಯ 18 ಗ್ರಾಮಗಳಲ್ಲಿ ನಡೆಯುವ ದೈವಗಳ ‘ಧರ್ಮ ನಡಾವಳಿಗೆ ಏಕ ರೀತಿಯ ಸಂಭಾವನೆ ನೀಡಲು ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಮುಂದೆ ದೈವ ಕರ್ಮಿಗಳನ್ನು ಕರೆದು ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ತೊಡಿಕಾನ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ತಾಲೂಕು ದೈವಾರಾಧಕರ ಒಕ್ಕೂಟದ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಮಾತನಾಡಿ “ನಮ್ಮದು ದೈವಾರಾಧಕರ ನಾಡು. ಪೂರ್ವ ಸಂಪ್ರದಾಯಗಳಂತೆ ದೈವಗಳ ಆರಾಧನೆಯನ್ನು ನಿರಂತರ ಆಚರಿಸಿಕೊಂಡು ಬರುತ್ತಿರುವವರು ನಾವು. ಇಲ್ಲಿ ಒಂದೊಂದು ದೈವಗಳನ್ನು ಬೇರೆ ಬೇರೆ ಸಮಾಜದವರು ಕಟ್ಟುತ್ತಿದ್ದಾರೆ. ಅವರಿಗೆ ನೀಡುವ ಸಂಭಾವನೆಯಲ್ಲಿಯೂ ವ್ಯತ್ಯಾಸಗಳು ಇರುತ್ತವೆ. ಇವೆಲ್ಲವನ್ನು ಒಂದೇ ರೀತಿಯಲ್ಲಿ ಕೊಂಡುಹೋಗಬೇಕೆನ್ನುವ ನಿಟ್ಟಿನಲ್ಲಿ ಈಗಾಗಲೇ ತಾಲೂಕು ಸಮಿತಿಯನ್ನು ರಚಿಸಲಾಗಿದ್ದು, ಮೂರ್‍ನಾಲ್ಕು ಸಭೆಯನ್ನು ನಡೆಸಲಾಗಿದೆ. ತೊಡಿಕಾನ ಸೀಮೆಯಲ್ಲಿ ೧೮ ಗ್ರಾಮಗಳು ಬರುತ್ತಿರುವುದರಿಂದ ಜತೆಗೆ ಕೊಡಗಿನ ಮೂರು ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು ಆರು ವಲಯವನ್ನಾಗಿ ಮಾಡಿಕೊಂಡಿzವೆ. ಈ ಆರು ವಲಯದಲ್ಲಿ ಅಲ್ಲಿಯ ದೈವ ಭಕ್ತರ ಸಭೆ ನಡೆಸಿ ಸಂಭಾವನೆಯ ಕುರಿತು ಚರ್ಚಿಸಲಾಗುವುದು.6 ವಲಯದವರೂ ತಾಲೂಕು ಸಮಿತಿಯಲ್ಲಿರುವಂತೆ ಮಾಡಿ ಅಲ್ಲಿ ಸಂಭಾವನೆಯ ಅಂತಿಮ ನಿರ್ಧಾರ ಕೈಗೊಂಡು ಬಳಿಕ ದೈವ ಕರ್ಮಿಯವರನ್ನು ಕರೆದು ಅವರ ಮುಂದೆ ಈ ಬಗ್ಗೆ ಪ್ರಸ್ತಾಪ ಮುಂದಿರಿಸಿ ಸೌಹಾರ್ದತೆಯಾಗಿ ನಡೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕಾಲಾವಧಿ ನಡಾವಳಿ, ಹರಕೆ ನಡಾವಳಿ ಹೀಗೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು.
ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ವಿ.ಹೇಮನಾಥ ಕುರುಂಜಿ, ಪದಾಧಿಕಾರಿಗಳಾದ ಪಿ.ಬಿ.ದಿವಾಕರ ರೈ, ಸುರೇಶ್ ಅಮೈ, ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಸೇರಿದಂತೆ 100ಕ್ಕೂ ಹೆಚ್ಚು ಮಂದಿ ದೈವ ಭಕ್ತರು ಉಪಸ್ಥಿತರಿದ್ದರು.

Related posts

Leave a Reply