Header Ads
Header Ads
Breaking News

ಸುಳ್ಯದ ನಾರ್ಕೋಡಿನಲ್ಲಿ ಕಾಡಾನೆ ದಾಳಿ ಅಪಾರ ಪ್ರಮಾಣದ ಕೃಷಿ ಹಾನಿ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾರ್ಕೋಡು ಭಾಗಗಳಲ್ಲಿ ಆನೆ ಹಾವಳಿ ಮತ್ತೆ ತೀವ್ರಗೊಂಡಿದೆ. ಆನೆಗಳ ಹಿಂಡು ದಾಳಿ ಮಾಡಿ ಅಪಾರ ಕೃಷಿ ಹಾನಿ ಮಾಡಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾರ್ಕೋಡು ಬೆಳ್ಳಪಾರೆ ವ್ಯಾಪ್ತಿಯಲ್ಲಿ ತೋಟಗಳಿಗೆ ಕಾಡಾನೆ ಹಿಂಡು ಧಾಳಿ ಮಾಡಿದ್ದು. ಆನೆ ಧಾಳಿಯಿಂದ ಅಪರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಮರಗಳನ್ನು ಉರುಳಿಸಿ ನಾಶ ಗೊಳಿಸಿದೆ. ಈ ಭಾಗದಲ್ಲಿ ಸತತ 5 ವರ್ಷಗಳಿಂದ ಆನೆ ಹಿಂಡು ದಾಳಿ ನಡೆಸುತ್ತ ಇದ್ದರೂ ಅರಣ್ಯ ಇಲಾಖೆ ಮೌನ ವಹಿಸಿದೆ.

ನಾರ್ಕೊಡಿನ ಕೃಪಾಶಂಕರ ಎಂಬವರ ತೋಟಗಳಿಗೆ ನುಗ್ಗಿದ ಆನೆಗಳು ತೆಂಗು, ಅಡಕೆ, ಬಾಳೆ, ಮತ್ತಿತ್ತರ ಕೃಷಿಗಳನ್ನು ನಾಶ ಮಾಡಿದೆ. ಅಲ್ಲದೇ ಆನೆಗಳ ಧಾಳಿ ತಡೆಯಲು ಅರಣ್ಯ ಇಲಾಖೆ ಮಾಡಿದ ಸೋಲಾರ್ ಬೇಲಿಗಳನ್ನು ದ್ವಂಸ ಮಾಡಿದೆ. ಈ ಪರಿಸರದಲ್ಲಿ 8 ಆನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆ ಯವರು 2 ದಿನಗಳ ಕಾರ್ಯಾಚರಣಾ ದಿಂದ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು ಅದರೆ ನಿನ್ನೇ ತಡ ರಾತ್ರಿ ಮತೆ ದಾಳಿ ಮಾಡಿ ಅಪರ ಪ್ರಮಾಣದ ಕೃಷಿ ಹಾನಿ ಮಾಡಿದೆ. ನಾರ್ಕೋಡು ಪ್ರದೇಶದಲ್ಲಿ ಆನೆ ಕಂದಕ ನಿರ್ಮಿಸಿದ್ದರು ಅದು ಹೆಸರಿಗೆ ಮಾತ್ರಾ ಆನೆ ಕಂದಕವಾಗಿ ಉಳಿದಿದೆ ಅದನ್ನು ಲೆಕ್ಕಿಸದೆ ಕಾಡಿನಿಂದ ಬಂದು ಕೃಷಿಗಳಿಗೆ ಹಾನಿ ಉಂಟು ಮಾಡಿದೆ. ಈಗಾಗಲೇ ಈ ಬಾಗದ ಕೃಷಿಕರು ಅಡಿಕೆ ಹಳದಿ ರೋಗ ಹಾಗೂ ಕೊಳೆ ರೋಗದೊಂದಿಗೆ ಕಾಡಾನೆ ಧಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಆನೆಗಳು ನಾಡಿಗೆ ಬರುವುದನ್ನು ತಡೆಯಲು ಕೇರಳ ಸರ್ಕಾರ ಅರಣ್ಯದ ಅಂಚಿನಲ್ಲಿ 17 ಕಿ.ಮೀ ಸೋಲಾರ್ ಬೇಲಿ ಅಳವಡಿಸಿದೆ. ನಾರ್ಕೋಡಿನಲ್ಲಿಯೂ ಕೂಡ ಕೆಲವು ಕಡೆ ಸೋಲಾರ್ ಬೇಲಿ ಅಳವಡಿಕೆ ಮಾಡಲಾಗಿದೆ. ಆದರೆ ಈಗ ಬೇಲಿ ಅಳವಡಿಸದ ಕಡೆಗಳಲ್ಲಿ ಆನೆಗಳಗಳು ಧಾಳಿ ಮಾಡುತ್ತಿದೆ. ಜನವಸತಿ ಪ್ರದೇಶದ ಕಡೆಗಳಲ್ಲಿಯೇ ಆನೆಗಳು ಬೀಡುಬಿಟ್ಟ ಕಾರಣ ಜನರು ಭಯದ ವಾತವರಣದಲ್ಲಿ ಕಾಲ ಕಳೆಯುತ್ತಿದ್ದಾರೆ.
ವರದಿ: ಪದ್ಮನಾಭ ಸುಳ್ಯ